ಬೆಂಗಳೂರು: ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ಪಡೆ (ಐಟಿಬಿಪಿ) ಕಾನ್ ಸ್ಟೇಬಲ್ ಕ್ಷೌರಿಕ, ಸಹಾಯಕ ಕರ್ಮಚಾರಿ ಮತ್ತು ಮಾಲಿ ಎಂಬ ಒಟ್ಟು 143 ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ಕಾನ್ ಸ್ಟೇಬಲ್ ಕ್ಷೌರಿಕ, ಸಫಾಯಿ ಕರ್ಮಚಾರಿ ಹುದ್ದೆಗಳಿಗೆ ಕನಿಷ್ಠ 18 ಮತ್ತು ಗರಿಷ್ಠ 23 ವರ್ಷ ಮೀರಿರಬಾರದು, ಮಾಲಿ ಹುದ್ದೆಗಳಿಗೆ ಕನಿಷ್ಠ 18 ಮತ್ತು ಗರಿಷ್ಠ 25 ವರ್ಷ ಮೀರಿರಬಾರದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 10ನೇ ತರಗತಿ ಪಾಸ್ ಆಗಿರಬೇಕು ಇಲ್ಲವೇ ತತ್ಸಮಾನ ಶೈಕ್ಷಣಿಕ ಅರ್ಹತೆ ಹೊಂದಿರಬೇಕು. ಸಂಬಂಧಿಸಿದ ಕ್ಷೇತ್ರದಲ್ಲಿ ಎರಡು ವರ್ಷಗಳ ಅನುಭವ ಇರಬೇಕಾಗುತ್ತದೆ. ಜುಲೈ 28 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಶುಲ್ಕ 100 ತುಂಬಿ ಅರ್ಜಿ ಸಲ್ಲಿಸಬಹುದು. ಎಸ್ ಟಿ ಮಹಿಳೆ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. ಮಾಹಿತಿಗೆ recruitment. itbppolice.in ಸಂಪರ್ಕಿಸಬಹುದು.