ಬೆಳಗಾವಿ : ಬೆಳಗಾವಿಯ ಅಮಾನ ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಮನೆಗೆ ನೀರು ನುಗ್ಗಿದೆ. ಮಾತ್ರವಲ್ಲ ಕಾಲು ಜಾರಿ ಬಿದ್ದು ವಯೋವೃದ್ದೆ ಮೃತಪಟ್ಟ ದುರ್ದೈವಕರ ಘಟನೆ ವರದಿಯಾಗಿದೆ.

ಮಹಬೂಬಿ ಅದಂ ಸಾಹೇಬ ಮಕಾಂದಾರ (79) ಎಂಬವರು
ಮೃತಪಟ್ಟಿದ್ದಾರೆ. ಕುಟುಂಬಸ್ಥರು ಶವ ಸಾಗಿಸಲು ತೀವ್ರ ಪರದಾಡಿದ್ದಾರೆ. ಜೊತೆಗೆ ನಿರಂತರ ಮಳೆಯಿಂದ ಕಾಲನಿಗೆ ಡ್ರೈನೇಜ್ ನೀರು ನುಗ್ಗಿ ದೊಡ್ಡ ಅವಾಂತರ ಸೃಷ್ಟಿಯಾಗಿತ್ತು. ಹೀಗಾಗಿ ಮೊಳಕಾಲುದ್ದ ನೀರಲ್ಲೇ ಜನರು ಶವವನ್ನು ಸಾಗಿಸುವಾಗ ಪರದಾಡಿದರು. ಕೊನೆಗೂ ಸುರಿಯುತ್ತಿರುವ ಮಳೆಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.