ಹೆಬ್ರಿ : ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಯಿತು.

ನಿವೃತ್ತ ಸೈನಿಕ , ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ , ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರವರು ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಬೆಳೆಸುವುದಕ್ಕಾಗಿ ಲಾಹೋರ್ ಬಸ್ ಯಾನ ಆರಂಭಿಸಿದರು. ಆದರೆ, ತಮ್ಮ ದುಷ್ಠ ಬುದ್ಧಿ ಬಿಡದ ಪಾಕಿಸ್ತಾನಿಗಳು ನಮ್ಮ ದೇಶದೊಳಗೆ ನುಗ್ಗಿ ನಮ್ಮ ಬಂಕರ್ ಗಳಲ್ಲಿ ಅಡಗಿ ಕುಳಿತರು. ಅದರ ಪತ್ತೆಗಾರಿಕೆಗಾಗಿ ತೆರಳಿದ ಇಪ್ಪತ ಎರಡು ವರ್ಷದ ಸೌರಭ್ ಖಾಲಿಯ ಮತ್ತು ಅವರ ತಂಡದವರನ್ನು ಬಂದಿಸಿ , ಇಪ್ಪತ್ತ ಎಂಟು ದಿನಗಳ ಕಾಲ ಚಿತ್ರ ಹಿಂಸೆ ಕೊಟ್ಟು , ಛಿದ್ರ ಚಿದ್ರವಾದ ಅವರ ದೇಹವನ್ನು ಚೀಲದಲ್ಲಿ ತುಂಬಿ ಎಸೆಯಲಾಯಿತು. ಇಂಥಹ ಪಾಪಿಗಳ ವಿರುದ್ಧ ಹೋರಾಡಿದ ನಮ್ಮ ವೀರ ಯೋಧರು ಕೊನೆಗೂ ಜಯ ಗಳಿಸುವುದರಲ್ಲಿ ಯಶಸ್ವಿಯಾದರು. ಆದರೆ ಐನೂರಕ್ಕೂ ಹೆಚ್ಚಿನ ವೀರ ಯೋಧರನ್ನ ಭಾರತ ಕಳೆದುಕೊಳ್ಳ ಬೇಕಾಯಿತು . ನಮ್ಮ ಯೋಧರು ನಮಗಾಗಿ ಈ ರೀತಿ ಹೋರಾಡುತ್ತಿದ್ದರೆ, ಇಲ್ಲಿ ನಾವು ಸರ್ಕಾರಿ ಉದ್ಯೋಗ ಪಡೆದು ಲಂಚ ಪಡೆಯುತ್ತಿದ್ದೇವೆ . ಅದೇ ರೀತಿ ಯೋಧ ಏನಾದರೂ ಲಂಚ ಪಡೆದು ಉಗ್ರರನ್ನ ಒಳಗೆ ಬಿಟ್ಟರೆ ನಮ್ಮ ಪರಿಸ್ಥಿತಿ ಏನಾಗಬಹುದು ಎಂದು ಯೋಚಿಸಿ. ವಿದ್ಯಾರ್ಥಿಗಳಾದ ನಿಮ್ಮೆಲ್ಲರ ಪ್ರಥಮ ಆಯ್ಕೆಯ ಕನಸು ಸೈನ್ಯ ಸೇರುವುದಾಗಿರಬೇಕು. ನಂತರ ನೀವು ಉದ್ಯೋಗಿ , ರೈತ ಏನೇ ಆಗಿ , ಯಾವುದೇ ವೃತ್ತಿ ಮಾಡಿದರೂ ಅದನ್ನು ನಿಷ್ಠೆಯಿಂದ ಮಾಡಿ ದೇಶ ಸೇವೆ ಮಾಡಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರಾಜೇಶ್ ನಾಯಕ್ ಮಾತನಾಡಿ, ನಿಮ್ಮ ಸಾಧನೆ ಮುಂದೊಂದು ದಿನ ಸಮಾಜ ನೆನಪಿಡುವ ಹಾಗೆ , ನಿಮ್ಮ ಹೆತ್ತವರ ಸಂದರ್ಶನ ಮಾದ್ಯಮದಲ್ಲಿ ಬರುವ ಹಾಗೆ ಇರಬೇಕು. ನಮ್ಮ ವಿದ್ಯಾರ್ಥಿಯೊಬ್ಬ ಸೈನ್ಯಕ್ಕೆ ಸೇರಿದರೆ ಅದಕ್ಕಿಂತ ಸಂತೋಷ ಬೇರೆ ಇಲ್ಲ -ಎಂದರು.

ಕಾರ್ಯದರ್ಶಿ ಗುರುದಾಸ್ ಶೆಣೈ, ಟ್ರಸ್ಟಿ ಬಾಲಕೃಷ್ಣ ಮಲ್ಯ , ಪ್ರಾಂಶುಪಾಲ ಅಮರೇಶ್ ಹೆಗ್ಡೆ ಉಪಸ್ಥಿತರಿದ್ದರು. ಉಪನ್ಯಾಸಕರು ವಿದ್ಯಾರ್ಥಿಗಳು ಹಾಜರಿದ್ದರು .ಉಪನ್ಯಾಸಕ ಸುಹಾಸ್ ನಿರೂಪಿಸಿ ವಂದಿಸಿದರು.