ಬೆಳಗಾವಿ: ಕೆ.ಎಲ್.ಎಸ್ ನ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ 2005 ನೇ ಸಾಲಿನ ಹಳೆ ವಿದ್ಯಾರ್ಥಿಗಳು ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.
ಹಳೆ ವಿದ್ಯಾರ್ಥಿಗಳ ಅಸೋಸಿಯೇಶನ್ ಅಧ್ಯಕ್ಷ,
ನ್ಯಾಯವಾದಿ ಎಂ.ಎಸ್.ಬಗಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬ ಹಳೆ ವಿದ್ಯಾರ್ಥಿ ಕಾಲೇಜಿಗೆ ಏನಾದರೂ ಕೊಡುಗೆ ನೀಡಬೇಕೆಂದು ಸಲಹೆ ನೀಡಿದರು.ಕಾಲೇಜಿನ ಪ್ರಾಚಾರ್ಯ ಡಾ. ಎ.ಎಚ್.ಹವಾಲ್ದಾರ ಅವರು, 2005ರ ನೆನಪುಗಳನ್ನು ಮೆಲುಕು ಹಾಕಿದರು. ಕಾಲೇಜಿನ ಹಳೆ ವಿದ್ಯಾರ್ಥಿಗಳ ಅಸೋಸಿಯೇಶನ್ನ ಸಂಯೋಜಕ ಪ್ರಸನ್ನಕುಮಾರ್ ಅವರು ಅಸೋಸಿಯೇಷನ್ನ ರಚನೆಯ ಕುರಿತು ಮಾಹಿತಿ ನೀಡಿದರು. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಸಲಹೆ ನೀಡಿದರು.
ಅಸೋಸಿಯೇಶನ್ ಸಹಯೋಗದಲ್ಲಿ 2005 ರ ವಿದ್ಯಾರ್ಥಿಗಳ ಬ್ಯಾಚ್ ಈ ಸಮಾರಂಭವನ್ನು ಆಯೋಜಿಸಿತ್ತು. ಹಳೆ ವಿದ್ಯಾರ್ಥಿಗಳಾದ ಮೋಹನ ರೈ, ಸಿದ್ಧಾರ್ಥ್ ಸಾವಂತ್, ಮನೀಶ್ ಜಾಧವ, ಸುನಿಲ್ ಅಸ್ಕಿ, ಅಮನ್ ನದಾಫ್, ಚಾರುಶೀಲಾ ಗೋಸಾವಿ ಮತ್ತು ಅಶ್ವಿನಿ ಪರಬ್ ತಮ್ಮ ನೆನಪುಗಳನ್ನು ಹಂಚಿಕೊಂಡರು. ಪ್ರಾಧ್ಯಾಪಕ ಸಂದೀಪ ದೇಸಾಯಿ, ಪ್ರೀತಿ ದೇಸಾಯಿ, ಬಿ.ಜಿ.ಪಾಟೀಲ, ಎಸ್.ಎಸ್.ಹೆಗಡೆ, ವಿದ್ಯಾತಾಯಿ ದೇಶಪಾಂಡೆ ಅಭಿಪ್ರಾಯ ಹಂಚಿಕೊಂಡರು.