ದೆಹಲಿ : ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಸಮಿತಿ ರಚನೆಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

ಜಿಲ್ಲಾ ನ್ಯಾಯಾಧೀಶರು ಸಮಿತಿಯ ಭಾಗವಾಗಿರತಕ್ಕದ್ದು ಅಥವಾ ಎಡಿಜೆ ಶ್ರೇಣಿಗಿಂತ ಕಡಿಮೆಯಿಲ್ಲದ ಯಾವುದೇ ಸದಸ್ಯರನ್ನು ನೇಮಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.

ನಿವೃತ್ತ ನ್ಯಾಯಮೂರ್ತಿ ಶ್ರೀಕೃಷ್ಣ ನೇತೃತ್ವದ ಸಮಿತಿಯ ವರದಿಯನ್ನು ಆಧರಿಸಿ ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಸಮಿತಿ ರಚನೆ ಕುರಿತು ನಿರ್ದೇಶನ ನೀಡಿದೆ.

ಸಮಿತಿಗೆ ನೇಮಕಗೊಂಡವರು ನ್ಯಾಯಮೂರ್ತಿ ಶ್ರೀಕೃಷ್ಣರೊಂದಿಗೆ ಸಮಾಲೋಚಿಸಬಹುದು. ಸಮಾಲೋಚಿಸಿ ಸಮಿತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು. ಅಲ್ಲದೇ ಅಧ್ಯಕ್ಷರು ಆಯ್ಕೆಯ ಮತವನ್ನು ಹೊಂದಿರುತ್ತಾರೆ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಹೊರತುಪಡಿಸಿ ಸದಸ್ಯರು ಸಲಹೆ ನೀಡಬಹುದು. ಅಧ್ಯಕ್ಷರ ನಿರ್ಧಾರದ ಮೇಲೆ ಇತರ ಸದಸ್ಯರು ವೀಟೋ ಅಧಿಕಾರ ಚಲಾಯಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.