ರಾಂಚಿ : ಜಾರ್ಖಂಡ್ ದ ಸೆರೈಕೆಲಾ ಮತ್ತು ಖಾರ್ಸಾವಾನ್ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ರೈಲು ದುರಂತದಲ್ಲಿ ಹಲವರು ಮೃತ ಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮುಂಬೈ-ಹೌರಾ ನಡುವಿನ ರೈಲಿನ 18 ಬೋಗಿಗಳು ಹಳಿ ತಪ್ಪಿವೆ. ಪರಿಣಾಮ ಸುಮಾರು 20 ಜನ ಗಾಯಗೊಂಡಿದ್ದು ಇಬ್ಬರು ಮೃತಪಟ್ಟಿದ್ದಾರೆ. ಈ ಅವಘಡ ಸಂಭವಿಸಿರುವ ಸ್ಥಳದ ಬಳಿ ಮತ್ತೊಂದು ಗೂಡ್ಸ್ ರೈಲು ಹಳಿ ತಪ್ಪಿದೆ. ಆದರೆ ಎರಡೂ ಅಪಘಾತಗಳು ಏಕಕಾಲದಲ್ಲೇ ಸಂಭವಿಸಿವಿಯೋ ಎಂಬ ಎಂಬುದು ಇದುವರೆಗೆ ಸ್ಪಷ್ಟವಾಗಿಲ್ಲ ಎಂದು ಆಗ್ನೇಯ ರೈಲ್ವೆ ವಕ್ತಾರ ಓಂ ಪ್ರಕಾಶ್ ಚರಣ್ ಹೇಳಿದ್ದಾರೆ.