ಹೆಬ್ರಿ : ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಲ್ಲಿ ಕೃಷಿ ಆಧಾರಿತ ಚಟುವಟಿಕೆಗಳ ಕುರಿತು ಆಸಕ್ತಿ ಹುಟ್ಟಿಸುವ ಸಲುವಾಗಿ ಕೆಸರಲ್ಲೊಂದು ದಿನ ಆಟ ಅಮೃತ ಆಟಿಕೂಟ ಮುದ್ರಾಡಿ ಯ ದಿವ್ಯ ಸಾಗರ್ ಗದ್ದೆಯಲ್ಲಿ ನಡೆಯಿತು.
ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ ಪೂಜಾರಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಕರಾವಳಿ ಭಾಗದಲ್ಲಿ ಆಟಿ ತಿಂಗಳು ಅತ್ಯಂತ ಪವಿತ್ರವಾದದ್ದು , ಈ ತಿಂಗಳಲ್ಲಿ ಕೃಷಿ ಚಟುವಟಿಕೆಗಳು ತುರುಸಿನಿಂದ ನಡೆಯುತ್ತದೆ. ಈ ತಿಂಗಳಲ್ಲಿ ನಾವು ತಯಾರಿಸುವ ಆಹಾರ ಕೂಡ ಆರೋಗ್ಯಕ್ಕೆ ಪೂರಕವಾದುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜೇಶ್ ನಾಯಕ್ ಅಧ್ಯಕ್ಷರು ಕಾಲೇಜು ಆಡಳಿತ ಮಂಡಳಿ ಮಾತನಾಡಿ, ಕೃಷಿ ಚಟುವಟಿಕೆಗಳು ಕ್ಷೀಣಿಸುತ್ತಿರುವ ಈ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಮಣ್ಣಿನ ಮಹತ್ವ , ಕೃಷಿಯ ಮಹತ್ವ , ಅದರಲ್ಲಿವ ಖುಷಿಯನ್ನು ತಿಳಿಯ ಪಡಿಸಬೇಕಾಗಿದೆ. ಜೀವನ ಮೌಲ್ಯ ಕಲಿಸುವ ಹತ್ತಾರು ಪ್ರಯತ್ನ ಮಾಡುತ್ತಾ ಬಂದಿರುವ ಅಮೃತ ಭಾರತಿ ಈ ಬಾರಿ ವಿಶೇಷವಾಗಿ ಕೆಸರುಗದ್ದೆ ಕ್ರೀಡಾ ಕೂಟ ಆಯೋಜಿಸಿದೆ ಎಂದರು.

ಪ್ರಾಂಶುಪಾಲ ಅಮರೇಶ್ ಹೆಗ್ಡೆ ಪ್ರಸ್ತಾವನೆಗೈದರು. ಕ್ರೀಡಾಕೂಟಕ್ಕೆ ಸಕಲ ಸಹಕಾರವನ್ನು ಇತ್ತ ಮುದ್ರಾಡಿಯ ಸಮಾಜ ಸೇವಕ ಗಣಪತಿ ಮುದ್ರಾಡಿ , ಕರ್ನಾಟಕ ರಕ್ಷಣಾ ವೇದಿಕೆಯ ಸಿ. ಎಂ. ಪ್ರಸನ್ನ , ಅಮೃತ ಭಾರತಿ ಟ್ರಸ್ಟನ ಕಾರ್ಯದರ್ಶಿ ಗುರುದಾಸ್ ಶೆಣೈ , ಸಂಸ್ಥೆಯ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ , ಪಿ . ಅರ್. ಓ. ವಿಜಯ್ ಕುಮಾರ್ ಶೆಟ್ಟಿ , ಚೀಫ್ ವಾರ್ಡನ್ ರವೀಂದ್ರ ಉಪಸ್ಥಿತರಿದ್ದರು . ವಿದ್ಯಾರ್ಥಿಗಳಿಗೆ ವಾಲಿಬಾಲ್, ತ್ರೋಬಾಲ್, ನಿಧಿ ಶೋಧನೆ , ಓಟ, ಕಂಬಳ ಓಟ , ಅಡಿಕೆ ಹಾಳೆ ಓಟ , ಹಿಮ್ಮುಖ ಓಟ , ಮಣ್ಣಿನಿಂದ ಮೂರ್ತಿ ರಚನೆ ಇತ್ಯಾದಿ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.


ಪೂರ್ವಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಸತೀಶ್ ಪೈ ಭಾಗವಹಿಸಿ ಬಹುಮಾನ ವಿತರಿಸಿ , ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ವಿದ್ಯಾರ್ಥಿಗಳು, ಉಪನ್ಯಾಸಕರು , ಹಳೆ ವಿದ್ಯಾರ್ಥಿ ಗಳು , ಪೋಷಕರು, ಕ್ರೀಡಾಭಿಮಾನಿಗಳು ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಉಪಸ್ಥಿತರದ್ದರು. ಉಪನ್ಯಾಸಕ ಸುಹಾಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.