ಪ್ಯಾರಿಸ್ : ಪ್ರಸಕ್ತ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ ಗೇಮ್ಸ್ 2024ರಲ್ಲಿ ಇಂದು ನಡೆದ 10 ಮೀಟರ್ ಏರ್ ಪಿಸ್ತೂಲ್ ಡಬಲ್ಸ್ ಶೂಟಿಂಗ್ ಸ್ಪರ್ಧೆಯಲ್ಲಿ ಮನು ಭಾಕರ್ ಮತ್ತು ಸರಬ್ಬೋತ್ ಸಿಂಗ್ ಕಂಚಿನ ಪದಕವನ್ನು ಗೆದ್ದಿದ್ದಾರೆ. ಇಂದು ನಡೆದ 10 ಮಿಟರ್ ಏರ್ ಪಿಸ್ತೂಲ್ ಶೂಟಿಂಗ್ ಡಬಲ್ಸ್ ಸ್ಪರ್ಧೆಯಲ್ಲಿ ಸೌತ್ ಕೊರಿಯಾ ವಿರುದ್ಧ ಗೆದ್ದು ಬೀಗಿದ ಮನು ಭಾಕ‌ರ್ ಮತ್ತು ಸರಜ್ಯೋತ್ ಸಿಂಗ್ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಮನು, ಶೂಟಿಂಗ್‌ನಲ್ಲಿ ಕಂಚಿನ ಮೆಡಲ್ ಪಡೆದಿದ್ದರು. ಇದೀಗ ಸತತವಾಗಿ ಎರಡನೇ ಬಾರಿಗೆ ಪದಕ ಗೆಲ್ಲುವ ಮುಖೇನ ಭಾರತೀಯರು ಹೆಮ್ಮೆಪಡುವಂತೆ ಮಾಡಿದ್ದಾರೆ.