ಬೆಳಗಾವಿ: ಕೆಪಿಇಎಸ್ ಜಿ ಎಂ ಪಾಟೀಲ ಕಾನೂನು ಕಾಲೇಜು ರಾಜ್ಯದ ಕಾನೂನು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಾಜ್ಯಮಟ್ಟದ ಭಾಷಣ ಸ್ಪರ್ಧೆಯಲ್ಲಿ ಕೆಎಲ್‌ಎಸ್‌ನ ರಾಜಾ ಲಖಮಗೌಡ ಕಾನೂನು ಕಾಲೇಜು ವಿದ್ಯಾರ್ಥಿ ಮಲ್ಲಿಕಾರ್ಜುನ ಪೂಜಾರಿ ಪ್ರಥಮ ಬಹುಮಾನ ಪಡೆದಿದ್ದಾರೆ. ಮಲ್ಲಿಕಾರ್ಜುನ ಪೂಜಾರಿ ಅವರು ಕನ್ನಡ ವಿಭಾಗದಲ್ಲಿ 5000 ರೂಪಾಯಿಗಳನ್ನು ಒಳಗೊಂಡ ಪ್ರಥಮ ಬಹುಮಾನ ಪಡೆದರು. ಸೌಮ್ಯಾ ಪಾಟೀಲ್ ಅವರು 500 ರೂಪಾಯಿಗಳನ್ನು ಒಳಗೊಂಡ ಸಮಾಧಾನಕರ ಬಹುಮಾನವನ್ನು ಇಂಗ್ಲಿಷ್ ವಿಭಾಗದಲ್ಲಿ ಪ್ರಮಾಣಪತ್ರವನ್ನು ಪಡೆದರು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್.ಕುಲಕರ್ಣಿ, ಆರ್.ಎಲ್.ಕಾನೂನು ಕಾಲೇಜು ಪ್ರಾಂಶುಪಾಲ ಡಾ.ಎ.ಎಚ್.ಹವಾಲ್ದಾರ್, ಕಾಲೇಜಿನ ಚರ್ಚಾ ಒಕ್ಕೂಟದ ಅಧ್ಯಕ್ಷೆ ಪ್ರೊ.ಮಾಧುರಿ ಕುಲಕರ್ಣಿ, ಎಲ್ಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ತಂಡವನ್ನು ಅಭಿನಂದಿಸಿದ್ದಾರೆ.