ಬೆಳಗಾವಿ : ವಿದ್ಯಾರ್ಥಿಗಳು ಹೊಸ ಹೊಸ ತಂತ್ರಜ್ಞಾನ ಹಾಗೂ ಸಂಶೋಧನೆಗಳ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ವಿಧಾನ ಪರಿಷತ್ ಮಾಜಿ ಸರಕಾರಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಸಲಹೆ ನೀಡಿದರು.
ನಗರದ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದ ಗಣಿತ ಶಾಸ್ತ, ಸಂಖ್ಯಾಶಾಸ್ತ್ರ ವಿಭಾಗಗಳು ಐಕ್ಯೂಎಸಿ ಮತ್ತು ಐಐಸಿ ಸಹಯೋಗದೊಂದಿಗೆ “ರಾಜ್ಯಮಟ್ಟದ ಗಣಿತಶಾಸ್ತ್ರ ಮಾದರಿಗಳ ಪ್ರದರ್ಶನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನದ ಮಹತ್ವದ ಕುರಿತು ಅವರು ವಿವರಿಸಿದರು.ಇಸ್ರೋದ ನಿವೃತ್ತ ವಿಜ್ಞಾನಿ ಉಷಾ ಡಿ. ಶಾಸ್ತ್ರಿ ಮಾತನಾಡಿ, ಭಾರತೀಯ ಬಾಹ್ಯಾಕಾಶ ಸಂಬಂಧಿ ಸಂಶೋಧನೆಯಲ್ಲಿ ಗಣಿತದ ಅಳವಡಿಕೆಯ ಕುರಿತು ವಿವರಿಸಿದರು. ಇಸ್ರೋದ ಜೊತೆಗಿನ ತಮ್ಮ ಅನುಭವಗಳನ್ನು ಅವರು ಹಂಚಿಕೊಂಡರು.
ಪ್ರಾಚಾರ್ಯೆ ಡಾ.ಜೆ.ಎಸ್. ಕವಳೇಕರ ಅಧ್ಯಕ್ಷತೆ ವಹಿಸಿದ್ದರು. ಸೌಮ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು.
ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುಧಾ ಸರೀಕರ ಸ್ವಾಗತಿಸಿದರು. ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥ ಅಜಿತ ಸುತಾರ ಪರಿಚಯಿಸಿದರು. ಕಾರ್ಯಕ್ರಮದ ಕಾರ್ಯದರ್ಶಿ ಡಾ.ವಿಜಯಲಕ್ಷ್ಮೀ ಪಾಟೀಲ ವಂದಿಸಿದರು. ಸಮೃದ್ಧಿ ಬರವೆ ಮತ್ತು ಭೂಮಿಕಾ ಟಿ. ನಿರೂಪಿಸಿದರು.ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕಿ ಡಾ.ಎಂ.ಎಂ. ಶಂಕ್ರಿಕೊಪ್ಪ ಉಪಸ್ಥಿತರಿದ್ದರು. ಪ್ರೊ. ಎಂ. ಎಸ್. ನಾಗಸುರೇಶ, ಮುಖ್ಯಸ್ಥರು, ಗಣಿತಶಾಸ್ತ್ರ ವಿಭಾಗ, ಜಿಎಸ್‌ಎಸ್ ಕಾಲೇಜು ಬೆಳಗಾವಿ, ಡಾ. ಪಿ.ಆರ್. ಹಂಪಿಹೊಳಿ, ಗೋಗಟೆ ತಂತ್ರಜ್ಞಾನ ಮಹಾವಿದ್ಯಾಲಯ ಬೆಳಗಾವಿ ಮತ್ತು ಡಾ. ಆದಿನಾಥ ಸಿ. ಉಪಾಧ್ಯೆ, ಸಂಗೊಳ್ಳಿ ರಾಯಣ್ಣ ಘಟಕ ಮಹಾವಿದ್ಯಾಲಯ, ಬೆಳಗಾವಿ ಇವರು ತೀರ್ಪುಗಾರರಾಗಿ ಆಗಮಿಸಿದ್ದರು. ಪದವಿಪೂರ್ವ ವಿಭಾಗದಿಂದ ರಾಜಾ ಲಖಮಗೌಡ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ಶೈಲಜಾ ಬಿರಾದಾರ ಮತ್ತು ಶ್ರೀಲಕ್ಷ್ಮೀ ಘಾಟಗೆ- ಪ್ರಥಮ, ಕೆ. ಎಲ್. ಇ. ಸಂಸ್ಥೆಯ ಜಿ. ಎಚ್. ಕಾಲೇಜು ಹಾವೇರಿಯ ವೈಷ್ಣವಿ ವಡ್ನಿಕೊಪ್ಪ ಮತ್ತು ತುಷಾರ ಶೆಟ್ಟಿ- ದ್ವಿತೀಯ, ಶ್ರೀ. ಸಿದ್ಧರಾಮೇಶ್ವರ ಸಂಯೋಜಿತ ಪದವಿಪೂರ್ವ ಮಹಾವಿದ್ಯಾಲಯದ ಪ್ರೀತಿ ದಳವಾಯಿ- ತೃತೀಯ ಸ್ಥಾನ ಪಡೆದರು. ಪದವಿ ವಿಭಾಗದಲ್ಲಿ ಸೇಜಲ ಹನುಮಶೇಠ ಮತ್ತು ಹೀರ ದಂಡ್- ಪ್ರಥಮ, ಸಂದೇಶ ಗೋಜೆಕರ ಮತ್ತು ಕೋಮಲ ದೇಸುರಕರ- ದ್ವಿತೀಯ ಮತ್ತು ಶ್ರೇಯಾ ಅಂಕೋಜಿ ಮತ್ತು ಮಿಸ್ಬಾ ಸೌದಾಗರ- ತೃತೀಯ ಸ್ಥಾನ ಪಡೆದರು.ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಪ್ರದೇಶಗಳಿಂದ 132 ವಿದ್ಯಾರ್ಥಿಗಳು ಭಾಗವಹಿಸಿದ್ದರು.