ಬೆಳಗಾವಿ: ನಾಗಪ್ಪ ರಾಮಚಂದ್ರ ವಿಸಾಳೆ ಪ್ರತಿಷ್ಠಾನ, ಮಾರಿಹಾಳ ವತಿಯಿಂದ ಜೀವನ ಗೌರವ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಬೆಳಗಾವಿ ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2024 -25ನೇ ಸಾಲಿನ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ, ನಿವೃತ್ತಿ ಹೊಂದಿದ ಹಿರಿಯ ಶಿಕ್ಷಕರಿಗೆ ಜೀವನ ಗೌರವ ಪ್ರಶಸ್ತಿ ಹಾಗೂ ವಿವಿಧ ಕಲಾ, ಕ್ರೀಡಾ ಪ್ರಕಾರಗಳಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ ಪ್ರಾಥಮಿಕ ವಿದ್ಯಾರ್ಥಿ ಗಳಿಗೆ ಕೊಡ ಮಾಡುವ ವಿಶೇಷ ಪ್ರಶಸ್ತಿಗಳಿಗಾಗಿ ನಾಗಪ್ಪ ರಾಮಚಂದ್ರ ಮಿಸಾಳೆ ಪ್ರತಿಷ್ಠಾನ ಮಾರಿಹಾಳ ಇವರ ಮೂಲಕ ಅರ್ಜಿ ಆಹ್ವಾನಿಸಿದೆ. ಶಾಲಾ ಶಿಕ್ಷಕರು ಕನಿಷ್ಠ 20 ವರ್ಷಗಳ ಅನುಭವ ಹೊಂದಿರಬೇಕು. ನಿವೃತ್ತ ಶಿಕ್ಷಕರು ಕನಿಷ್ಠ 75 ವಯಸ್ಸು ದಾಟಿರಬೇಕು. ಅರ್ಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸ್ವವಿವರ ಹಾಗೂ ಸಾಧನೆಗಳ ದಾಖಲೆಗಳೊಂದಿಗೆ ಅರ್ಜಿಗಳನ್ನು ಡಾ.ಡಿ.ಎನ್‌. ಮಿಸಾಳೆ ಪ್ಲಾಟ್ ನಂ. 19, ಪಿ ಆ್ಯಂಡ್ ಟಿ ಕಾಲೋನಿ, ಹನುಮಾನ ನಗರ 2ನೇ ಹಂತ ಬೆಳಗಾವಿ-590019 ಇವರಿಗೆ ಆಗಸ್ಟ್ 31ರ ಒಳಗೆ ತಲುಪುವಂತೆ ಪೋಸ್ಟ್ ಮೂಲಕ ಕಳುಹಿಸಬೇಕು. ಪುರಸ್ಕಾರ ರೂಪದಲ್ಲಿ ನಗದು ಬಹುಮಾನ, ಪ್ರಶಸ್ತಿ ಫಲಕ ಮತ್ತು ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭ ಸೆ.16ರಂದು ಬೆಳಗಾವಿ ತಾಲೂಕಿನ ಮಾರಿಹಾಳ ಗ್ರಾಮದ ಮರಾಠ ಸಂಸ್ಕೃತಿಕ ಭವನದಲ್ಲಿ ನಡೆಯಲಿದೆ. ಮಾಹಿತಿಗೆ ಮೊಬೈಲ್ : 9480398025, 9448691484 ಇಲ್ಲಿಗೆ ಸಂಪರ್ಕಿಸಬಹುದು.