ಬೆಳಗಾವಿ : ಲಾಟ್ವಿಯಾದ ರಿಗಾದಲ್ಲಿ ನಡೆದ ರಿಗಾ ಟೆಕ್ನಿಕಲ್ ಯೂನಿವರ್ಸಿಟಿ ಓಪನ್ ಚೆಸ್ ಈವೆಂಟ್‌ನಲ್ಲಿ ಬೆಳಗಾವಿಯ ನಿರಂಜನ ನವಲಗುಂದ ಶ್ರೇಷ್ಠ ಸಾಧನೆಗೈದಿದ್ದಾರೆ.

ಅವರು ಮೂರನೇ (ಅಂತಿಮ) ಅಂತರರಾಷ್ಟ್ರೀಯ ಮಾಸ್ಟರ್ ನಾರ್ಮ್ ಅನ್ನು ಪಡೆದುಕೊಂಡಿದ್ದಾರೆ.

ಅವರು ಈವೆಂಟ್ ಮೂಲಕ 74.4 ELO ಅಂಕಗಳನ್ನು ಗಳಿಸಿದರು ಮತ್ತು ಈವೆಂಟ್‌ನಲ್ಲಿ ಅತ್ಯುತ್ತಮ ರೇಟಿಂಗ್ ಬಹುಮಾನವನ್ನು (2100-2199) ಗೆದ್ದರು. ಈ ಮೂಲಕ ಅವರು ಇಂಟರ್‌ನ್ಯಾಶನಲ್ ಮಾಸ್ಟರ್ ಟೈಟಲ್‌ಗೆ ಹತ್ತಿರವಾಗಿದ್ದಾರೆ.