ಬೆಳಗಾವಿ : ನಗರದ ಹಿಂದವಾಡಿಯ ಪ್ರೇರಣಾ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 78ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಅಮಿತ್ ವಾಗರಾಳಿ ಮಾತನಾಡುತ್ತಾ ” ಇಂದಿನ ಪ್ರಜೆಗಳಾದ ನಮಗೆ ,ದೇಶಕ್ಕೆ ಏನಾದರೂ ಸಾಧಿಸುವ ಅವಕಾಶವಿದೆ ,ಅದನ್ನು ಅರ್ಥ ಮಾಡಿಕೊಂಡು ದೇಶಕ್ಕೆ ನಾವು ಸಹ ಏನಾದರೂ ಕೊಡುಗೆ ನೀಡಬೇಕಾಗಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ವಿವಿಧ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ನೃತ್ಯ ಮತ್ತು ಭಾಷಣದ ಮೂಲಕ ರಾಷ್ಟ್ರ ಧ್ವಜಕ್ಕೆ ವಂದನೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಭಾರಿ ಪ್ರಾಚಾರ್ಯ ಪ್ರಶಾಂತ ಗೌಡರ ,ಕಿರಣ ಪಾಟೀಲ, ಕೌಸ್ತುಬ್ ನಾಯಕ, ನೂರ್ ಜಹಾನ್ ,ಸುಪ್ರಿಯ ಮುಂತಾದ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.