ಬೆಂಗಳೂರು: ಪಿಜಿಯಲ್ಲಿ ಊಟ ಮಾಡುತ್ತಿರುವಾಗ ಇಲಿ ವಿಷ ಸ್ಪ್ರೇ ಮಾಡಿದ ಕಾರಣ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ಜ್ಞಾನಭಾರತಿಯ ಅಮ್ಮ ಆಶ್ರಮದ ಮುಂಭಾಗದ ಪಿಜಿಯಲ್ಲಿ ಘಟನೆ ನಡೆದಿದೆ. ರಾತ್ರಿ 8 ಗಂಟೆ ಸುಮಾರಿಗೆ ವಿದ್ಯಾರ್ಥಿಗಳು ಊಟ ಮಾಡುತ್ತಿದ್ದಾಗ ಊಟದ ಹಾಲ್‌ನಲ್ಲೇ ಇಲಿ ಪಾಯಿಸನ್ ಸ್ಪ್ರೇ ಮಾಡಲಾಗಿತ್ತು. ಇದರಿಂದ ವಿದ್ಯಾರ್ಥಿಗಳಲ್ಲಿ ವಾಂತಿ ಕಾಣಿಸಿಕೊಂಡಿತ್ತು. ಪಿಜಿಯಲ್ಲಿ‌ ಕೆಲಸ ಮಾಡುತ್ತಿದ್ದ ಮಂಜುನಾಥ ಎಂಬಾತ ಸ್ಪ್ರೇ ಮಾಡಿದ್ದು, ಇದರಿಂದ ಫುಡ್‌ ಪಾಯಿಸನ್‌ ಆಗಿದೆ.

ಸುಮಾರು 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹತ್ತಿರದ ಅಭಯ ಆಸ್ಪತ್ರೆ, ಭಾನು ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಕೊಡಿಸಲಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಜ್ಞಾನಭಾರತಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಖಾಸಗಿ ನರ್ಸಿಂಗ್ ಕಾಲೇಜಿನಿಂದ ಹಾಸ್ಟೆಲ್ ನಡೆಸಲಾಗುತ್ತಿದ್ದು, ಹಾಸ್ಟೆಲ್ ಬಿಲ್ಡಿಂಗ್‌ನ ನೆಲ‌ ಮಹಡಿಯಲ್ಲಿ ಊಟದ ಹಾಲ್ ಇದೆ. ಜ್ಞಾನ‌ಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.