ಬೆಳಗಾವಿ: ಬೆಳಗಾವಿ ಆರ್ ಪಿ ಡಿ ಕಾಲೇಜು ಎದುರಿನ ಶ್ರೀ ಕೃಷ್ಣ ಮಠದ ವತಿಯಿಂದ ಶ್ರೀ ಕೃಷ್ಣ ಜಯಂತಿ ಮತ್ತು ಶ್ರೀ ಕೃಷ್ಣ ಲೀಲೋತ್ಸವ ಆ. 26 ಮತ್ತು 27 ರಂದು ನಡೆಯಲಿದೆ.
26 ರಂದು ಪ್ರಾತಃ ಪೂಜೆ ಮತ್ತು ಬೆಳಗ್ಗೆ 8 ಕ್ಕೆ ಲಕ್ಷ ತುಳಸಿ ಅರ್ಚನೆ, ಪುಷ್ಪಾಲಂಕಾರ, ಅಖಂಡ ಭಜನೆ, ಸಂಜೆ 6 ಕ್ಕೆ ಪ್ರವಚನ, 7 ರಿಂದ 9 ರವರೆಗೆ ದಾಸವಾಣಿ ಕಾರ್ಯಕ್ರಮ ಸುಪ್ರಿಯಾ ಪ್ರವೀಣ ಹುನಗುಂದ ಮತ್ತು ಸಂಗಡಿಗರಿಂದ ನಡೆಯಲಿದೆ. ರಾತ್ರಿ 11:15 ಕ್ಕೆ ವಿಶೇಷ ಪೂಜೆ, ರಾತ್ರಿ ಚಂದ್ರೋದಯ 12:15 ಕ್ಕೆ ಶ್ರೀ ಕೃಷ್ಣನಿಗೆ ಅರ್ಘ್ಯ ಪ್ರದಾನ ನೆರವೇರಲಿದೆ.ಆ. 27 ರಂದು ಪ್ರಾತಃ 5 ಕ್ಕೆ ಪ್ರಾರ್ಥನೆ ಶ್ರೀ ಕೃಷ್ಣ ದೇವರಿಗೆ ಪಂಚಾಮೃತ ಅಭಿಷೇಕ, ಬೆಣ್ಣೆ ಅಲಂಕಾರ, ಮಹಾಪೂಜೆ, 8 ಕ್ಕೆ ಅನ್ನ ಸಂತರ್ಪಣೆ, ಸಂಜೆ 5 ಕ್ಕೆ ಚಿಣ್ಣರಿಂದ ನೃತ್ಯಕಲಾ ಪ್ರದರ್ಶನ, 6 ಕ್ಕೆ ಚಿಣ್ಣರಿಂದ ಶ್ರೀ ಕೃಷ್ಣ ವೇಷ ಸ್ಪರ್ಧೆ, 6:30 ಕ್ಕೆ ಪಲ್ಲಕ್ಕಿ ಉತ್ಸವ, ರಥೋತ್ಸವ, ಸ್ವಸ್ತಿವಾಚನ, ದೀಪಾರಾಧನೆ, ರಂಗ ಪೂಜೆ ನೆರವೇರಲಿದೆ ಎಂದು ಕೃಷ್ಣ ಮಠದ ಪ್ರಕಟಣೆ ತಿಳಿಸಿದೆ.