ಬೆಳಗಾವಿ : ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ವಿರುದ್ಧ ಶಿರೋಮಣಿ ಅಕಾಲಿದಳ (ಅಮೃತಸರ) ಮುಖ್ಯಸ್ಥ ಸಿಮ್ರಂಜಿತ್ ಸಿಂಗ್ ಮಾನ್ ನೀಡಿರುವ ಹೇಳಿಕೆಯನ್ನು ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಕಾರ್ಯದರ್ಶಿ ಡಾ. ಸೋನಾಲಿ ಸರ್ನೋಬತ್ ತೀವ್ರವಾಗಿ ಖಂಡಿಸಿದ್ದಾರೆ.

ಮಾನ್‌ ರಾಜಕೀಯ ಭಾಷಣ ಮಿತಿಯನ್ನು ಮೀರಿದೆ. ಅತ್ಯಾಚಾರದಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಬೆಳಕು ಚೆಲ್ಲುವುದು ಮತ್ತು ಅವುಗಳಿಗೆ ಕೆಟ್ಟ ಶಬ್ದ ಬಳಸುವುದು ನಾಚಿಕೆಗೇಡಿನ ಸಂಗತಿ. ಈ ಕೂಡಲೇ ಮಾನ್ ಅವರು ಕಂಗನಾ ಅವರ ಬಗ್ಗೆ ಆಡಿರುವ ಪ್ರಚೋದನಾಕಾರಿ ಹೇಳಿಕೆಗೆ ತಕ್ಷಣ ಕ್ಷಮೆಯಾಚಿಸಬೇಕು. ಭವಿಷ್ಯದಲ್ಲಿ ಅವರು ಇಂತಹ ಸಂವೇದನಾರಹಿತ ಹೇಳಿಕೆಗಳನ್ನು ನೀಡದಂತೆ ನಿರೀಕ್ಷಿಸುತ್ತೇನೆ. ಒಬ್ಬ ಮಹಿಳೆ ಮತ್ತು ನಾಯಕಿಯಾಗಿ, ನಾನು ಕಂಗನಾ ಅವರಿಗೆ ಬೆಂಬಲವಾಗಿ ನಿಲ್ಲುತ್ತೇನೆ ಎಂದು ಅವರು ತಿಳಿಸಿದ್ದಾರೆ.