ಬೆಳಗಾವಿ : ಚನ್ನಮ್ಮ ಕಿತ್ತೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಅಪಹರಣಕ್ಕೊಳಗಾಗಿರುವ ಬಿಜೆಪಿ ಸದಸ್ಯ ನಾಗರಾಜ ಅಸುಂಡಿ ಅವರ ತಾಯಿ ಇದೀಗ ತೀವ್ರ ಮನನೊಂದು ಅನಾರೋಗ್ಯಕ್ಕೆತುತ್ತಾಗಿದ್ದು, ಧಾರವಾಡದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೃದಯ ಸಂಬಂಧಿ ಕಾಯಿಲೆಯಿಂದ ಅವರು ಬಳಲುತ್ತಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮಗನ ಅಪಹರಣದಿಂದ ಕುಟುಂಬ ತೀವ್ರವಾಗಿ ಮನನೊಂದಿದ್ದು ಪೊಲೀಸರಿಗೆ ದೂರು ನೀಡಿದ್ದರೂ ಇದುವರೆಗೂ ಅವರ ಸುಳಿವು ದೊರೆತಿಲ್ಲ.

ಅದರೆ, ಪೊಲೀಸರು ನಾಗರಾಜ ಅಸುಂಡಿ ಅವರು ಬೆಂಗಳೂರಿನಲ್ಲಿ ಆರಾಮವಾಗಿ ತಿರುಗಾಡುತ್ತಿದ್ದಾನೆ ಎಂದು ತಮ್ಮ ಬಳಿ ಇರುವ ವಿಡಿಯೋ ತೋರಿಸಿ ಹೇಳುತ್ತಿದ್ದಾರೆ. ಆದರೆ, ಅವರನ್ನು ಕರೆತರುವ ಪ್ರಯತ್ನ ಆಗಿಲ್ಲ ಎಂದು ಬಿಜೆಪಿ ದೂರಿದೆ. ಒಟ್ಟಾರೆ, ಇದೀಗ ಮಗನ ಅಪಹರಣದಿಂದ ನೊಂದಿರುವ ತಾಯಿ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.