ಬೆಳಗಾವಿ: ಚನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ಅಪಹರಣಕ್ಕೆ ಒಳಗಾದ ಬಿಜೆಪಿ ಸದಸ್ಯ ನಾಗರಾಜ ಅಸುಂಡಿ ಅವರು ಕೊನೆಗೂ ಪತ್ತೆಯಾಗಿದ್ದಾರೆ.
ನಾಗರಾಜ ಅಸುಂಡಿ ಅವರನ್ನು ಬೈಲಹೊಂಗಲ ಕೋರ್ಟ್ ನಲ್ಲಿ ಪೊಲೀಸರು ಹಾಜರುಪಡಿಸಲು ಕರೆತಂದಿದ್ದಾರೆ.
ಸೆಪ್ಟೆಂಬರ್ ಮೂರರಂದು ಕಿತ್ತೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನಿಗದಿಯಾಗಿತ್ತು. ಆದರೆ ಅಷ್ಟರಲ್ಲಿ ಅವರನ್ನು ಅಪಹರಿಸಲಾಗಿತ್ತು. ಅವರನ್ನು ಅಪಹರಣ ಮಾಡಿದ್ದ ವಾಹನ ಬೆಂಗಳೂರು ರೆಸಾರ್ಟ್ ಬಳಿ ಪತ್ತೆಯಾಗಿತ್ತು. ಬಿಜೆಪಿ ತಮ್ಮ ಪಕ್ಷದ ಸದಸ್ಯನನ್ನು ಅಪಹರಿಸಿದ ಬಗ್ಗೆ ತೀವ್ರ ಪ್ರತಿಭಟನೆ ನಡೆಸಿತ್ತು. ನಾಗರಾಜ ಅಸುಂಡಿ ಅವರ ತಾಯಿ ಸಹಾ ಮಗನ ಅಪಹರಣದಿಂದ ಬೇಸರಗೊಂಡು ಧಾರವಾಡ ಆಸ್ಪತ್ರೆಗೆ ದಾಖಲಾಗಿದ್ದರು. ಕೊನೆಗೂ ನಾಗರಾಜ ಅಸುಂಡಿ ಅವರು ಪತ್ತೆಯಾಗಿದ್ದರಿಂದ ಪ್ರಕರಣಕ್ಕೆ ತೆರೆ ಬಿದ್ದಂತಾಗಿದೆ.
ವಕಾಲತು ವಹಿಸಿದ ಕಿತ್ತೂರು ಮಾಜಿ ಶಾಸಕ ಮಹಾಂತೇಶ ದೊಡಗೌಡರ
ಕೋಟ್ ಧರಿಸಿ ಕೋರ್ಟ್ ಗೆ ಆಗಮಿಸಿದ್ದು ಗಮನ ಸೆಳೆಯಿತು.