ಬೆಳಗಾವಿ: ಕಿತ್ತೂರು ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯ ನಾಗರಾಜ ಅಸುಂಡಿ ಅವರ ಅಪಹರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಆರೋಪಿಗಳಾದ ಪ್ರವೀಣ್ ಜಕ್ಕನ ಗೌಡರ್, ಬಸವರಾಜ ಸಂಗೊಳ್ಳಿ ಮತ್ತು ಅಶೋಕ್ ಮಾಳಗಿ ಅವರನ್ನು ಕಿತ್ತೂರಿನ ಕಿರಿಯ ಶ್ರೇಣಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಭಾರತೀಯ ನ್ಯಾಯ ಸುರಕ್ಷಾ ದಂಡ ಸಂಹಿತೆ 183 ರ ಅಡಿ ನ್ಯಾಯಾಧೀಶರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಮುಂದೆ ಇವರನ್ನು ಬೈಲಹೊಂಗಲದ ಜೆಎಂಎಫ್ ಸಿ ಪ್ರಥಮ ದರ್ಜೆ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ. ಹಾವೇರಿ ಜಿಲ್ಲೆಯ ಬಂಕಾಪುರ ಬಳಿ ನಾಗರಾಜ ಅವರನ್ನು ಅಪಹರಣ ಮಾಡಿದ್ದ ಮೂವರು ಆರೋಪಿಗಳು ಪತ್ತೆಯಾಗಿದ್ದರು. ಹೇಬಿಯಸ್ ಕಾರ್ಪಸ್‌ ಅಡಿ ಪ್ರಕರಣ ದಾಖಲಾಗಿತ್ತು. ನಾಗರಾಜ ಅಸುಂಡಿ ಅವರ ಪರವಾಗಿ ಬಿಜೆಪಿಯ ಮಾಜಿ ಶಾಸಕ ಮಹಾಂತೇಶ್ ದೊಡ್ಡ ಗೌಡರ್ ಅವರು ಕರಿಕೋಟು ಧರಿಸಿ ವಕಾಲತು ನಡೆಸಿರುವುದು ಎಲ್ಲರ ಗಮನ ಸೆಳೆಯಿತು.