ಅಹಮದಾಬಾದ್ : ಭಾರತದ ಖ್ಯಾತ ಆಲ್ ರೌಂಡರ್ ರವೀಂದ್ರ ಜಡೇಜಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅವರ ಪತ್ನಿ, ಜಾಮ್ನಗರದ ಬಿಜೆಪಿ ಶಾಸಕಿ ರಿವಾಬಾ ಜಡೇಜಾ ಅವರು ತಮ್ಮ ಬಿಜೆಪಿ ಸದಸ್ಯತ್ವ ಕಾರ್ಡ್ಗಳೊಂದಿಗೆ ದಂಪತಿಗಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ಸದಸ್ಯತ್ವ ಅಭಿಯಾನ ನಡೆಯಿತು. ರವೀಂದ್ರ ಜಡೇಜಾ ಅವರ ಈ ಕ್ರಮವು 2024 ರ ಟಿ 20 ವಿಶ್ವಕಪ್ ಭಾರತದ ವಿಜಯದ ನಂತರ. ಅದು ಸಹಾ ಟಿ 20 ನಿಂದ ನಿವೃತ್ತಿಯಾದ ಬಳಿಕ. ಮುಂದಿನ ದಿನಗಳಲ್ಲಿ ಅವರು ಬಿಜೆಪಿಯಿಂದ ಯಾವ ರೀತಿಯಲ್ಲಿ ಗುರುತಿಸಿಕೊಳ್ಳಲಿದ್ದಾರೆ ಎನ್ನುವುದು ಕಾದುನೋಡಬೇಕಾಗಿದೆ.