ಬಳ್ಳಾರಿ : ಚಿತ್ರದುರ್ಗದ ರೇಣುಕ ಸ್ವಾಮಿ ಕೊಲೆ ಆರೋಪದಲ್ಲಿ ಬಳ್ಳಾರಿ ಜೈಲು ಪಾಲಾಗಿರುವ ದರ್ಶನ್ ಅವರನ್ನು ತಕ್ಷಣ ನೋಡಬೇಕು. ಅವರ ಜೊತೆ ಒಂದೆರಡು ಮಾತನಾಡಬೇಕು ಎಂದು ಮಹಿಳಾ ಅಭಿಮಾನಿ ಒಬ್ಬರು ಹಠ ಹಿಡಿದ ಘಟನೆ ಇಂದು ಜೈಲಿನ ಎದುರು ನಡೆದಿದೆ.

ಕಲಬುರ್ಗಿ ಮೂಲದ ಬೆಂಗಳೂರಿನ ಆರ್ ಆರ್ ನಗರ ನಿವಾಸಿ ಲಕ್ಷ್ಮೀ ಎಂಬ ಮಹಿಳೆ ಬೆಂಗಳೂರಿನಿಂದ ಬಳ್ಳಾರಿ ಜಿಲ್ಲೆಗೆ ಗುರುವಾರ ಆಗಮಿಸಿ ದರ್ಶನ್ ಅವರನ್ನು ನೋಡಲೇಬೇಕು ಎಂದು ಪಟ್ಟು ಹಿಡಿದರು. ಜೈಲು ಸಿಬ್ಬಂದಿ ದರ್ಶನ್ ಅವರನ್ನು ಸಂಬಂಧಿಗಳು ಮಾತ್ರ ನೋಡಲು ಅವಕಾಶ ಇದೆ ಎಂದು ವಿವರಿಸಿದರು. ಆಗ ಮಹಿಳೆ ನಾನು ದರ್ಶನ್ ಅವರನ್ನು ಮದುವೆ ಆಗುವುದಕ್ಕೂ ಸಿದ್ಧವಾಗಿ ಬಂದಿರುವೆ, ದರ್ಶನ್ ನನಗೆ ಇಷ್ಟ. ಬೆಂಗಳೂರು ಜೈಲಲ್ಲಿ ಸಹಾ ಬಿಡಲಿಲ್ಲ, ಈಗ ಇಲ್ಲಿಗೆ ಬಂದಿರುವೆ. ಅವರಿಗೆ ಹಣ್ಣು ಕೊಟ್ಟು ನೋಡಿ ಹೋಗಿ ಎಂದು ಹೇಳಿದರು. ಆಗ ಜೈಲು ಸಿಬ್ಬಂದಿ ಅವರ ಮನವೊಲಿಸಿ ಕೊನೆಗೂ ವಾಪಸ್ ಕಳಿಸಿದ್ದಾರೆ.