ಬೆಳಗಾವಿ : ಬೆಳಗಾವಿಯ ದಿ ಇನ್ಸಿಟ್ಯೂಷನ್ ಆಫ್ ಇಂಜಿನಿಯರ್ಸ್ ಕೇಂದ್ರದಲ್ಲಿ ಸೆ.15 ರಂದು ಸಂಜೆ 6 ಗಂಟೆಗೆ 57 ನೇ ಇಂಜನಿಯರಿಂಗ್‌ ದಿನವನ್ನು ಆಚರಿಸುತ್ತಿದ್ದು ಇಬ್ಬರು ಶತಾಯುಷಿ ನಿವೃತ್ತ ಇಂಜನಿಯರ್ ಎಂ.ಎಸ್. ಚಿಕ್ಕಮಠ ಹಾಗೂ ಎಸ್.ಎಸ್. ಬೆಳ್ಳುಂಕೆ ಅವರನ್ನು ಸನ್ಮಾನಿಸಲಿದೆ. ಚಿಕ್ಕಮಠ ಅವರು ಹುಬ್ಬಳ್ಳಿಯ ಹಾಗೂ ಬೆಳ್ಳುಂಕೆ ಅವರು ಧಾರವಾಡದ ನಿವಾಸಿಗಳಾಗಿದ್ದಾರೆ.

ಬೆಳಗಾವಿಯ ಜೈನ್ ಕಾಲೇಜಿನ ಪ್ರಾಚಾರ್ಯ ಪ್ರೊ. ಶಿವಕುಮಾರ ಹಾಗೂ ಕೊಲ್ಲಾಪುರದ ಇಂಜನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಸುಹಾಸ ಗಜಾನನ ಸಾತ್ಪುತೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು ಅಧ್ಯಕ್ಷತೆಯನ್ನು ಇನ್ ಸ್ಟಿಟ್ಯೂಟ್ ಅಧ್ಯಕ್ಷ ಎಸ್.ವೈ. ಕುಂದರಗಿ ವಹಿಸಲಿದ್ದಾರೆ.

ಬೆಳಗಾವಿಯ ಶಿವಬಸವನಗರದ ಇನ್ಸಿಟ್ಯೂಟ್ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.