ಬೆಳಗಾವಿ: ನಗರದ ದರ್ಬಾರ್ ಗಲ್ಲಿಯಲ್ಲಿ ಪ್ಯಾಲೇಸ್ತಿನ್ ರಾಷ್ಟ್ರಧ್ವಜ ಹೋಲುವ ಪೆಂಡಾಲ್ ಹಾಕಲಾಗಿದೆ. ಪೊಲೀಸರು ಇಂತಹ ಪೆಂಡಾಲ್ ಹಾಕದಂತೆ ಸೂಚನೆ ರವಾನಿಸಿದರೂ ಸಹ ಅದಕ್ಕೆ ಗಮನ ಹರಿಸಿಲ್ಲ. ರಸ್ತೆಯಲ್ಲಿ
ಪ್ಯಾಲೇಸ್ತಿನ್ ರಾಷ್ಟ್ರದ ಶಾಮಿಯಾನವನ್ನೂ ಹಾಕಿದ್ದಾರೆ. ಬೆಳಗಾವಿಯಲ್ಲಿ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಈದ್ ಮಿಲಾದ್ ಹಬ್ಬದ ಮೆರವಣಿಗೆ ರವಿವಾರ ಆಯೋಜಿತಗೊಂಡಿದೆ. ಈ ಹಿನ್ನಲೆಯಲ್ಲಿ ಪ್ರಮುಖ ಬೀದಿಗಳಲ್ಲಿ ಈಗ ಶಾಮಿಯಾನ ಹಾಗೂ ಮತ್ತು ಪೆಂಡಾಲ್ ಹಾಕಲಾಗುತ್ತಿದೆ. ಪೊಲೀಸರು ಇದೀಗ ಇದರ ಹಿಂದಿರುವವರು ಯಾರು ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕೊನೆಗೆ ಪೊಲೀಸರು ಪ್ರಕರಣದ ಗಂಭೀರತೆ ಅರಿತು ಈ ಕೂಡಲೇ ಈ ಬಣ್ಣದ ಶಾಮಿಯಾನ ತೆರವುಗೊಳಿಸಲೇಬೇಕು ಎಂದು ಎಚ್ಚರಿಕೆ ರವಾನಿಸಿದ ನಂತರ ಇದನ್ನು ತೆರವುಗೊಳಿಸಲಾಗಿದೆ.
ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಕೆಲವರು ಪ್ಯಾಲೇಸ್ಟೆನ್ ದೇಶದ ಧ್ವಜವನ್ನು ಬೈಕ್ ನಲ್ಲಿ ಆರಿಸುವ ಮೂಲಕ ಸುದ್ದಿಯಾಗಿದ್ದನ್ನು ಇಲ್ಲಿ ನೆನಪಿಸಬಹುದು.