21-09-2024ರ ಶನಿವಾರದಂದು ಸ. ಹಿ. ಪ್ರಾ ಶಾಲೆ ಅಮಾಸೆಬೈಲಿ ನಲ್ಲಿ ಅರಣ್ಯ ಇಲಾಖೆಯವರು “71ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮ” ಆಯೋಜಿಸಿದ್ದರು.
1 ರಿಂದ 4ನೇ ತರಗತಿಯ ಮಕ್ಕಳನ್ನು ಕಿರಿಯ ಪ್ರಾಥಮಿಕ ವಿಭಾಗ ಮತ್ತು 5 ರಿಂದ 7ನೇ ತರಗತಿಯ ಮಕ್ಕಳನ್ನು ಹಿರಿಯ ಪ್ರಾಥಮಿಕ ವಿಭಾಗವಾಗಿ ವಿಂಗಡಿಸಿ, ವನ್ಯಜೀವಿಗಳನ್ನು ಗುರುತಿಸುವ ಹಾಗೂ ಪರಿಕಲ್ಪನೆಯನ್ನು ಆಧಾರಿಸಿ ವನ್ಯಜೀವಿಗಳ ಚಿತ್ರ ಬರೆಯುವ ಸ್ಪರ್ಧೆಗಳನ್ನು ಎರ್ಪಡಿಸಿದ್ದರು.
ಪೂರ್ವ ನಿಗದಿಯಂತೆ ಶನಿವಾರ ಮುಂಜಾನೆ ಶಾಲೆಗೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಸರ ರಕ್ಷಣೆಯ ಕುರಿತು ಎಳೆಯ ಮಕ್ಕಳಲ್ಲಿ ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮ ನಡೆಸುತ್ತಿದ್ದು,ಪ್ರತಿ ಸ್ಪರ್ಧೆಯಲ್ಲಿ ವಿಜೇತರಾದ ಇಬ್ಬರು ವಿದ್ಯಾರ್ಥಿಗಳನ್ನು ಕಾರ್ಕಳದಲ್ಲಿ ನಡೆಯುವ ವನ್ಯಜೀವಿ ಸಪ್ತಾಹ ಕಾರ್ಯಕ್ರಮದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಅಮಾಸೆಬೈಲು ವಲಯದ 71ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮ ನೆರವೇರಿಸಲು ಸಹಕರಿಸಿದ ಸರ್ವರಿಗೂ ಅರಣ್ಯ ಇಲಾಖೆಯ ಸಿಬ್ಬಂದಿಯವರು ವಂದಿಸಿದರು.