ಶಿರ್ತಾಡಿ : ಆದಾಯ ತೆರಿಗೆ, ಜಿಎಸ್‌ಟಿ ಮತ್ತು ಇತರ ಹಣಕಾಸು ವಿಷಯಗಳಲ್ಲಿ ವಕೀಲರ ವ್ಯಾಪ್ತಿ” ಕುರಿತು ತಾಂತ್ರಿಕ ಅಧಿವೇಶನವನ್ನು C A ಆಕಾಶ್ ದೀಪ್ ಪೈ ಚಾರ್ಟರ್ಡ್ ಅಕೌಂಟೆಂಟ್, ಮೂಡಬಿದ್ರೆ ಇವರು ಸಂಪನ್ಮೂಲ ವ್ಯಕ್ತಿಯಾಗಿ 24.09.2024 ರಂದು ಶಿರ್ತಾಡಿಯ ಭುವನ ಜ್ಯೋತಿ ಕಾನೂನು ಕಾಲೇಜಿನ ಅನಾವರಣ-2K24 ಕಾರ್ಯಕ್ರಮದ 3 ನೇ ದಿನದ ಅಂಗವಾಗಿ “ಆದಾಯ ತೆರಿಗೆ GST ಮತ್ತು ಇತರ ವಿಷಯಗಳಲ್ಲಿ ವಕೀಲ ವೃತ್ತಿಗೆ ಇರುವ ಅವಕಾಶಗಳು” ಎಂಬ ವಿಷಯದ ಕುರಿತು ತಾಂತ್ರಿಕ ಅಧಿವೇಶನವನ್ನು ನಡೆಸಿಕೊಟ್ಟರು.
ಇವರು ವಿದ್ಯಾರ್ಥಿಗಳಲ್ಲಿ ಹಣಕಾಸು ಮತ್ತು ಕಾನೂನುಗಳ ಮೇಲೆ ಆದಾಯ ತೆರಿಗೆ ಮತ್ತು GST ಯ ಮಹತ್ವದ ಬಗ್ಗೆ ಅರಿವು ಮೂಡಿಸಿದರು. ನಾಗರಿಕರು ಆದಾಯ ತೆರಿಗೆಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು ಮತ್ತು ದೇಶದ ಅಭಿವೃದ್ಧಿಯಲ್ಲಿ ತಮ್ಮ ಹಣದ ಪಾತ್ರವನ್ನು ಗ್ರಹಿಸಬೇಕು ಎಂಬುದರ ಅರಿವು ಮೂಡಿಸಿ ಕೊಟ್ಟರು. ಆದಾಯ ತೆರಿಗೆ ಕಾಯ್ದೆ ಮತ್ತು ವಿವಿಧ ಸಾರ್ವಜನಿಕ ಸೇವಾ ಚಟುವಟಿಕೆಗಳಿಗೆ ಆದಾಯವನ್ನು ಗಳಿಸುವಲ್ಲಿ ಅದರ ಪಾತ್ರದ ಬಗ್ಗೆ ಅವರು ವಿವರಿಸಿದರು. ಅವರು ವಿಷಯವನ್ನು ಅಂತರಾಷ್ಟ್ರೀಯ ತೆರಿಗೆ, ಕಂಪನಿ ಕಾನೂನು, ವರ್ಗಾವಣೆ ಬೆಲೆ, ಪರ್ಯಾಯ ವಿವಾದಗಳ ಪರಿಹಾರ, ಸಮಗ್ರತೆ ವೃತ್ತಿಪರ ವಿಶ್ವಾಸ, ಸಂವಹನ, ಕರಡು ರಚನೆಗಳ ವಿಷಯಗಳನ್ನು ವಿವರಿಸಿದರು.
ಸಮಾರಂಭದಲ್ಲಿ ಭುವನ ಜ್ಯೋತಿ ಎಜುಕೇಶನ್ ಟ್ರಸ್ಟ್ ನ ಆರ್ ಪ್ರಶಾಂತ್ ಡಿ ಸೋಜಾ, ರಾಘವೇಂದ್ರ ಪ್ರಭು, ಶ್ರೀಮತಿ ಲತಾ, ಪ್ರಶಾಂತ್ ಎನ್, ಶರಣಪ್ಪ ಭಾವಿ, ಕಾಲೇಜಿನ ಪ್ರಾಂಶುಪಾಲ ಡಾ.ಪ್ರದೀಪ್ ಎಂ.ಡಿ. ಉಪಸ್ಥಿತರಿದ್ದರು. ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕ ಕೌಶಿಕ್ ಸಿ ಕಾರ್ಯಕ್ರಮವನ್ನು ಸಂಯೋಜಿಸಿದರು.