ಬೆಳಗಾವಿ: ಶನಿವಾರ ಇಲ್ಲಿನ ಸಮ್ಮಾನ್ ಹೋಟೆಲ್ ಎದುರು ಕಾಲೇಜು ವಿದ್ಯಾರ್ಥಿಗಳು ವಡಾ ಪಾವ್ ತಿನ್ನುತ್ತಿದ್ದಾಗ ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯಮಯ ವಿಡಿಯೋ ಹಾಕಿದ್ದಕ್ಕೆ ಮಾರಾಮಾರಿ ನಡೆಸಿದ್ದಾರೆ. ಬೆಳಗಾವಿಯ ಸಮ್ಮಾನ್ ಹೊಟೇಲ್ ಎದುರು ಶನಿವಾರ ಸುಮಾರು 25 ವಿದ್ಯಾರ್ಥಿಗಳ ಗುಂಪು ನಾಲ್ಕೈದು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಹಾಸ್ಯಮಯ ವಿಡಿಯೋ ಕುರಿತು ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

(ಸಾಂದರ್ಭಿಕ ಚಿತ್ರ)