ಬೆಳಗಾವಿ: ಮೂಲತಃ ಶಿವಮೊಗ್ಗದವರಾದ ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ (ಸಿಇಒ) ಹಾಗೂ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಎಂ.ಇ. ಶಿವಲಿಂಗ ಮೂರ್ತಿ ಅವರು ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಒಂದೂವರೆ ದಶಕದ ಹಿಂದೆ ಅಂದರೆ 2007 ರ ಅವಧಿಯಿಂದ ಬೆಳಗಾವಿಯಲ್ಲಿ ಎಂ.ಇ.ಶಿವಲಿಂಗ ಮೂರ್ತಿ ಅವರು ಸಿಇಒ,ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಚಿರಪರಿಚಿತರಾಗಿದ್ದರು.