ಬೆಳಗಾವಿ: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಆಡಳಿತ)ರಾಗಿ ಆರ್‌.ಎಸ್‌. ಸೀತಾರಾಮು ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಮಂಡ್ಯ ಜಿಲ್ಲೆ ಕೆ.ಆರ್. ಪೇಟೆಯ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಶಿವರಾಮು ಅವರಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮುಂಬಡ್ತಿ ನೀಡಿ ಆದೇಶಿಸಿದೆ. ಒಂದು ತಿಂಗಳಿನಿಂದ ಪ್ರಭಾರ ಡಿಡಿಪಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬಿ.ಎ. ಮೇಕನಮರಡಿ ಅಧಿಕಾರ ಹಸ್ತಾಂತರಿಸಿದರು.