ಬೆಳಗಾವಿ : ಬೆಳಗಾವಿಯಿಂದ ವಿಜಯಪುರಕ್ಕೆ ಸಂಚರಿಸುತ್ತಿದ್ದ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಚಿಕ್ಕೋಡಿ ತಾಲೂಕು ಅಂಕಲಿ ಸಮೀಪ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ಹೋದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ವಿಜಯಪುರ ಘಟಕಕ್ಕೆ ಸೇರಿದ KA28=F2470 ಬಸ್ ಅವಘಡದಿಂದ ಪಾರಾಗಿದೆ.
ಬುಧವಾರ ಮಧ್ಯಾಹ್ನ ಮಳೆ ಸುರಿಯುತ್ತಿತ್ತು. ಎದುರಿನಿಂದ ಬಂದ ಬಸ್ ಕಾಣಿಸದೇ ಇರುವುದರಿಂದ ಚಾಲಕ ಬಸ್ಸನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಸಾಧ್ಯವಾಗಲಿಲ್ಲ. ಬಸ್ ಒಮ್ಮೆಲೆ ರಸ್ತೆ ಬಿಟ್ಟು ಬದಿಗೆ ಸಂಚರಿಸಿದೆ. ಅಪಾಯದ ಸೂಚನೆಯಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ತುಸು ಆತಂಕಗೊಂಡರು. ಆದರೆ, ಅದೃಷ್ಟ ವಶಾತ್ ಪ್ರಯಾಣಿಕರಿಗೆ ಯಾರಿಗೂ ಏನು ಆಗಿಲ್ಲ.