ಹೆಬ್ರಿ : ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಅನರ್ಘ್ಯ ರತ್ನ ರತನ್ ಟಾಟಾ ಅವರ ನುಡಿ ನಮನ ಕಾರ್ಯಕ್ರಮ ನಡೆಯಿತು. ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು ರತನ್ ಟಾಟಾ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಮೌನಾಚರಣೆ ಮಾಡಿ ಅಗಲಿದ ದಿವ್ಯಾತ್ಮಕ್ಕೆ ಚಿರಶಾಂತಿ ಕೋರಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರು ಮಾತನಾಡಿ , ವಿಶ್ವದ ಉದ್ಯಮಿಗಳು ನಮ್ಮ ದೇಶದತ್ತ ತಿರುಗಿ ನೋಡುವಂತೆ ಮಾಡಿದ ನಮ್ಮ ದೇಶದ ಸಾಧಕ ಉದ್ಯಮಿ ರತನ್ ಟಾಟಾ ಅವರು. ಅವರು ತಮ್ಮ ಸಂಸ್ಥೆಯ ಉದ್ಯೋಗಿಗಳನ್ನ ತಮ್ಮ ಕುಟುಂಬದವರಂತೆ ನೋಡಿಕೊಳ್ಳುತ್ತಿದ್ದರು. ಅಪಾರ ದೇಶಪ್ರೇಮಿಯಾಗಿರುವ ಅವರು ಈ ದೇಶ ಸಂಕಷ್ಟದಲ್ಲಿದ್ದಾಗ ದೊಡ್ಡ ಮಟ್ಟದ ದೇಣಿಗೆಯನ್ನು ಈ ದೇಶಕ್ಕಾಗಿ ನೀಡಿದವರು ಕರೋನ ದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ದೇಶದ ಕೈಹಿಡಿದವರು ಈ ದೇಶ ಸಂಕಷ್ಟಕ್ಕೆ ಒಳಗಾದರೆ ನನ್ನೆಲ್ಲಾ ಆಸ್ತಿಯನ್ನು ಮಾರಿ ದೇಶ ಸೇವೆ ಮಾಡಲು ಸಿದ್ಧನಿದ್ದೇನೆ ಎನ್ನುವ ಮಾತುಗಳನ್ನಾಡಿದವರು. ಇಂದು ನಾವು ಅವರನ್ನು ಕಳೆದುಕೊಂಡದ್ದು ನಮ್ಮ ದೇಶದ ಆಸ್ತಿಯನ್ನೇ ಕಳೆದುಕೊಂಡಂತಾಗಿದೆ. ಇಂತಹ ವ್ಯಕ್ತಿಗಳು ನಮ್ಮ ಮುಂದಿನ ಯುವ ಪೀಳಿಗೆಗೆ ಆದರ್ಶಗಳಾಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

ಟಾಟಾ ರವರ ಸಾಧನೆ ಮತ್ತು ಸೇವೆಯನ್ನು ದೃಶ್ಯ ಮಾಧ್ಯಮದ ಮೂಲಕ ತೋರಿಸಲಾಯಿತು. ಉಪನ್ಯಾಸಕ ಸುಹಾಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.