ಬೆಳಗಾವಿ : ಭೀಕರ ರಸ್ತೆ ಅಪಘಾತಕ್ಕೆ ಬೆಳಗಾವಿ ಜಿಐಟಿ ಕಾಲೇಜು ವಿದ್ಯಾರ್ಥಿ ಬಲಿಯಾಗಿದ್ದಾನೆ.
ನಿಖಿಲ್ ಬಾಬಗೌಡ ಪಾಟೀಲ (19)ಮೃತ ಪಟ್ಟ ವಿದ್ಯಾರ್ಥಿ. ಚಿಕ್ಕೋಡಿ ತಾಲೂಕು ಮಾಂಜರಿ ಗ್ರಾಮದವನಾದ ಈತ ತನ್ನ ಕಾಲೇಜು ಸ್ನೇಹಿತ ಮೂಡಲಗಿಯ ನಿಖಿಲ್ ರಮೇಶ ಬೆಳಕೂಡ ಜೊತೆ ಖಾನಾಪುರ ತಾಲೂಕು ಜಾಂಬೋಟಿ ಪ್ರದೇಶದ ಅಮಟೆ ಬಳಿ ಬೈಕ್ ನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಕಂಟೇನರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ಅಪಘಾತಕ್ಕೆ ಬಲಿಯಾಗಿದ್ದಾನೆ.
ಗುರುವಾರ ಅಕ್ಟೋಬರ್ 17ರಂದು ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ತ ಕಾಲೇಜಿಗೆ ರಜೆ ಇತ್ತು. ಈ ಇಬ್ಬರು ವಿದ್ಯಾರ್ಥಿಗಳು ಖಾನಾಪುರ ತಾಲೂಕಿನ ಜಾಂಬೋಟಿ ಪ್ರದೇಶಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ಇವರು ಇದ್ದ ಬೈಕ್ ಎದುರಿನಿಂದ ಬರುತ್ತಿದ್ದ ಕಂಟೇನರ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಿಖಿಲ್ ಮೃತಪಟ್ಟಿದ್ದು, ಆತನ ಜೊತೆಯಲ್ಲಿದ್ದ ಮೂಡಲಗಿಯ ನಿಖಿಲ್ ರಮೇಶ ಬೆಳಕೂಡ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದೇ ವರ್ಷ ಕಾಲೇಜು ಕಲಿಯಲು ಬೆಳಗಾವಿಗೆ ಬಂದಿದ್ದ ಬಂದ ಮಾಂಜರಿಯ ನಿಖಿಲ ಪಾಟೀಲನನ್ನು ಕಳೆದುಕೊಂಡಿರುವ ಮಾಂಜರಿ ಗ್ರಾಮಸ್ಥರು ಇದೀಗ ಅತೀವವಾಗಿ ದುಃಖಿಸುತ್ತಿದ್ದಾರೆ