ಬೆಳಗಾವಿ : ರಾಜ್ಯದ ವಿವಿಧ ಭಾಗಗಳ ಏಳು ಡಿವೈಎಸ್ಪಿ ಹಾಗೂ 55 ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆಗೊಳಿಸಿ ಪೊಲೀಸ್ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.
ಪೊಲೀಸ್ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಣಯದಂತೆ ವರ್ಗಾವಣೆ ಮಾಡಲಾಗಿದೆ.
ಡಿವೈಎಸ್ಪಿಗಳಾದ ಕೆ.ಎಂ.ಸತೀಶ್ ಅವರನ್ನು ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗ ಹಾಗೂ ಗೋಪಾಲ್ ನಾಯಕ್ ಅವರನ್ನು ಬೆಂಗಳೂರಿನ ಬಿಎಂಟಿಎಫ್ಗೆ ವರ್ಗಾವಣೆ ಮಾಡಲಾಗಿದೆ. ಉಳಿದ ಡಿವೈಎಸ್ಪಿಗಳನ್ನು ಇತರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗಿದೆ.
ಇನ್ಸ್ಪೆಕ್ಟರ್ಗಳ ಪೈಕಿ ಜೆ.ಎಂ. ರೇಣುಕಾ ಅವರನ್ನು ವೈಟ್ಫೀಲ್ಡ್ ಠಾಣೆಗೆ ಹಾಗೂ ಲಿಂಗರಾಜು ಅವರನ್ನು ಬೆಂಗಳೂರು ದಕ್ಷಿಣ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಗೋಕಾಕಗೆ ಸುರೇಶ ಬಾಬು ಆರ್ . ಬಂಡಿವಡ್ಡರ ಅವರನ್ನು ರಾಜ್ಯ ಸರಕಾರ ನೇಮಕಗೊಳಿಸಿ ಆದೇಶ ಹೊರಡಿಸಿದೆ. ಗೋಪಾಲ ಇದೀಗ ವರ್ಗಾವಣೆಗೊಂಡಿದ್ದಾರೆ.
ಅದರಂತೆ ಅಥಣಿಗೆ ಸಂತೋಷ ಹಲ್ಲೂರ ಅವರನ್ನು ನೂತನ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ರಾಜ್ಯ ಸರಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಗೆ ಯು.ಎಸ್. ಅವಟಿ, ಬೆಳಗಾವಿ ಹೆಸ್ಕಾಂ ಜಾಗೃತ ದಳಕ್ಕೆ ಶ್ರೀದೇವಿ ಅಲಗೌಡ ಪಾಟೀಲ, ಘಟಪ್ರಭಾಕ್ಕೆ ಹಸನ್ ಸಾಬ್ ದಸ್ತಗಿರ ಸಾಬ್ ಮುಲ್ಲಾ, ಖಾನಾಪುರ ಪೊಲೀಸ್ ತರಬೇತಿ ಶಾಲೆಗೆ ಭೀಮಣ್ಣ ಎಂ.ಸೋರಿ ಅವರನ್ನು ನೇಮಕ ಮಾಡಿರುವ ರಾಜ್ಯ ಸರಕಾರ ಈ ಬಗ್ಗೆ ಆದೇಶ ಹೊರಡಿಸಿದೆ.