ಭುವನೇಶ್ವರ : ಒಡಿಶಾದ ಬುಡಕಟ್ಟು ಮಹಿಳೆಯೊಬ್ಬರು ಬಿಜೆಪಿ ನಾಯಕನಿಗೆ 100 ಹಸ್ತಾಂತರಿಸಿದ ನಂತರ ‘ವಿಕಸಿತ ಭಾರತ್’ ನಿರ್ಮಾಣವನ್ನು ಮುಂದುವರಿಸಲು ಪ್ರೇರೇಪಿಸಿದ ‘ನಾರಿ ಶಕ್ತಿ’ಗೆ ಪ್ರಧಾನಿ ನರೇಂದ್ರ ಮೋದಿ ಕೃತಜ್ಞತೆ ಸಲ್ಲಿಸಿದರು. ಒಡಿಶಾದ ಸುಂದರ್ಗಢ್ ಜಿಲ್ಲೆಯಲ್ಲಿ ನಡೆದ ಸದಸ್ಯತ್ವ ಅಭಿಯಾನದಲ್ಲಿ ಇದು ನಡೆದಿದೆ ಎಂದು ಬಿಜೆಪಿ ಉಪಾಧ್ಯಕ್ಷ ಬೈಜಯಂತ್ ಜಯ್ ಪಾಂಡಾ ಅವರು ತಿಳಿಸಿದ್ದಾರೆ.
ಬುಡಕಟ್ಟು ಮಹಿಳೆ ಮೋದಿ ಅವರಿಗೆ ಧನ್ಯವಾದರೂಪದಲ್ಲಿ ನೂರು ರೂ.ಹಸ್ತಾಂತರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ನಾರಿ ಶಕ್ತಿಯ ಆಶೀರ್ವಾದ ವಿಕಸಿತ ಭಾರತ ನಿರ್ಮಿಸುವ ಕೆಲಸ ಮಾಡಲು ಪ್ರೇರೇಪಣೆ ನೀಡುತ್ತದೆ ಎಂದು ಹೇಳಿದ್ದಾರೆ. ಸುಂದರಗಢ್ ಜಿಲ್ಲೆಯಲ್ಲಿ ಶುಕ್ರವಾರ ಪಕ್ಷದ ಸದಸ್ಯತ್ವ ಅಭಿಯಾನ ನಡೆದಿತ್ತು. ಈ ಸಂದರ್ಭದಲ್ಲಿ ಅವರು ಹಣವನ್ನು ನೀಡಿದ್ದಾರೆ ಎಂದು ಪಾಂಡಾ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು ತಿಳಿಸಲು ಒತ್ತಾಯಿಸಿ ನನಗೆ ನೂರು ರೂಪಾಯಿ ನೀಡಿದರು. ಇದು ಒಡಿಶಾ ಮತ್ತು ಭಾರತ ಅನುಭವಿಸುತ್ತಿರುವ ರೂಪಾಂತರದ ಪ್ರತಿಬಿಂಬವಾಗಿದೆ ಎಂದು ಹೇಳಿದ್ದಾರೆ.