ಬಳ್ಳಾರಿ : ಕೆಎಸ್ಆರ್ಟಿಸಿ ನಿವೃತ್ತ ಚಾಲಕನ ಮಗನಾದ ಬಂಗಾರು ಹನುಮಂತ ಅವರಿಗೆ ಸಂಡೂರು ವಿಧಾನಸಭೆ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಒಲಿದಿದೆ.
ಪ್ರಹ್ಲಾದ್ ಜೋಷಿ ಜೊತೆಗೆ ಉತ್ತಮ ಒಡನಾಟ ಹೊಂದಿರುವ ಬಂಗಾರು ಹನುಮಂತು ಅವರು ವಿಜಯೇಂದ್ರರ ಅಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.
ಬಂಗಾರು ಹನುಮಂತು ಅವರು ಜನಾರ್ದನ ರೆಡ್ಡಿ ಆಪ್ತರಾಗಿದ್ದಾರೆ. ಟಿಕೆಟ್ ರೇಸ್ನಲ್ಲಿ ಬಂಗಾರು ಹನುಮಂತು ಮತ್ತು ಕೆ.ಎಸ್. ದಿವಾಕರ್ ಅವರ ಹೆಸರಿತ್ತು. ಕಳೆದ ಚುನಾವಣೆಯಲ್ಲಿ ಕೆಆರ್ಪಿಪಿ ಪಕ್ಷದಿಂದ ಸ್ಪರ್ಧಿಸಿ ದಿವಾಕರ್ ಪರಾಭವಗೊಂಡಿದ್ದರು.
ರಿಯಲ್ ಎಸ್ಟೇಟ್, ಟ್ರಾನ್ಸ್ಪೋರ್ಟ್, ಕ್ರಷರ್, ಸಿವಿಲ್ ವರ್ಕ್ಸ್, ಉದ್ಯಮ ನಡೆಸುತ್ತಿದ್ದಾರೆ. ಕೃಷಿಯಲ್ಲೂ ತೊಡಗಿಸಿಕೊಂಡಿದ್ದಾರೆ.
ಪಕ್ಷದ ಎಸ್ಪಿ ಮೋರ್ಚಾ ರಾಜ್ಯಾಧ್ಯಕ್ಷರಾಗಿರುವ ಅವರು 2018 ರ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ 7,191 ಮತ ಪಡೆದಿದ್ದರು. 2023ರ ಚುನಾವಣೆಯಲ್ಲೂ ಟಿಕೆಟ್ ಸಿಗಲಿಲ್ಲ, ಹೊಸಪೇಟೆ ತಾಲೂಕಿನ ಮರಿಯಮ್ಮನಳ್ಳಿಯ ಸೋಮಣ್ಣ ಹಾಗೂ ಹುಲಿಗೆಮ್ಮ ದಂಪತಿಯ ಹಿರಿಯ ಮಗನಾಗಿ 1983
ರ ಜ.4 ರಂದು ಸಂಡೂರು ತಾಲೂಕಿನ ದೇವಗಿರಿ ಬಳಿಯ ಸುಬ್ರಯ್ಯನಹಳ್ಳಿಯಲ್ಲಿ ಜನನ, ಬಿಎ, ಬಿ.ಎಡ್ ಪದವಿ ಪಡೆದಿದ್ದಾರೆ. ತಾಯಿ ಬಂಗಾರು ಹುಲಿಗಮ್ಮ ಕೂಡ್ಲಿಗಿ ಪಟ್ಟಣ ಪಂಚಾಯಿತಿ ಸದಸ್ಯೆಯಾಗಿದ್ದರು.ಬಂಗಾರು ಹನುಮಂತು 1998 ರಲ್ಲಿ ಎಬಿವಿಪಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದು, 2004 ರಲ್ಲಿ ಬಿಜೆಪಿ ಸೇರ್ಪಡೆ, ನಂತರ 2006-09 ರವರೆಗೆ ಕೂಡ್ಲಿಗಿ ಮಂಡಲದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ, 2017-19 ರವರೆಗೆ ಬಿಜೆಪಿ ಜಿಲ್ಲಾ ಮೋರ್ಚಾದ ಸದಸ್ಯರಾಗಿ, 2020-22ರವರೆಗೆ ಜಿಲ್ಲಾ ಎಸ್ಟಿ ಮೋರ್ಚಾ, ನಂತರ ಎಸ್ಟಿ ರಾಜ್ಯಾಧ್ಯಕ್ಷರಾಗಿದ್ದಾರೆ. ರಾಜಕೀಯ ಪ್ರವೇಶಕ್ಕೂ ಮುನ್ನ ಕೆಲ ವರ್ಷಗಳ ಹಿಂದೆ ಮನಗೆದ್ದ ಬಂಗಾರು, ಆರ್ಯಪುತ್ರ ಸೇರಿ ಮೂರು ಚಲನಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿದ್ದರು.