ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಅವರಿಗೆ ತಮ್ಮ ಮಾತುಗಳೇ ಮುಳುವಾಗುತ್ತಿವೆ. ಈಗಾಗಲೇ ಸುದೀಪ್ ಎಚ್ಚರಿಕೆ ನೀಡಿದ್ದರು ಚೈತ್ರಾ ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಇದೀಗ ಮತ್ತೆ ನಾಲಿಗೆ ಹರಿಬಿಟ್ಟ ಚೈತ್ರಾ ವಿವಾದ ಹುಟ್ಟು ಹಾಕಿದ್ದಾರೆ.
ಕಳೆದ ವಾರ ಚೈತ್ರಾ ‘ಒಬ್ಬ ಅಪ್ಪನಿಗೆ ಹುಟ್ಟಿದ್ದರೆ..’ ಎಂದು ಜಗದೀಶ್ಗೆ ಹೇಳಿದ್ದರು. ಆ ಮಾತನ್ನು ಕಿಚ್ಚ ಸುದೀಪ್ ಖಂಡಿಸಿದ್ದರು. ಆದರೂ ಚೈತ್ರಾ ಕೊಂಚವೂ ಬದಲಾಗಿಲ್ಲ. ಅಕ್ಟೋಬರ್ 21ರ ಸಂಚಿಕೆಯಲ್ಲಿ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ.
ಕಳೆದ ವಾರ ಜಗದೀಶ್ ಅವರಿಗೆ ಉಗ್ರಂ ಮಂಜು ಅವರು ಚಪ್ಪಲಿ ತೋರಿಸಿದ್ದರು. ಅದು ಸರಿಯಲ್ಲ ಎಂದು ಸುದೀಪ್ ಅವರು ಹೇಳಿದ್ದರು. ಇಂಥ ಹಲವು ಕಾರಣಗಳಿಂದಾಗಿ ಮನೆಯ ಸದಸ್ಯರಿಗೆ ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದರು. ಅಷ್ಟಾದರೂ ಕೂಡ ಚೈತ್ರಾ ಅವರು ಮಾತಿನ ವರಸೆ ಬದಲಾಯಿಸಿಕೊಂಡಿಲ್ಲ. ಸಂದರ್ಭ ಬಂದರೆ ತಾವು ಮೆಟ್ಟಿನಲ್ಲಿ ಹೊಡೆಯುವುದಾಗಿ ಚೈತ್ರಾ ಹೇಳಿದ್ದಾರೆ.
ಈ ಮೊದಲು ಹಂಸಾ ಅವರ ಬಗ್ಗೆ ಗೋಲ್ಡ್ ಸುರೇಶ್ ಏನೇನೋ ಕಮೆಂಟ್ ಮಾಡಿದ್ದರು. ಹಂಸಾ ಅವರದ್ದು ಲವ್ ಸ್ಟೋರಿ ನಡೆಯುತ್ತಿತ್ತು ಎಂದು ಅವರು ಹೇಳಿದ್ದರು. ಅದರಿಂದ ಹಂಸಾಗೆ ಬೇಸರ ಆಯಿತು. ಹಾಗಾಗಿ ಅವರು ಈ ವಿಚಾರವನ್ನು ಚೈತ್ರಾ ಕುಂದಾಪುರ ಜೊತೆ ಚರ್ಚೆ ಮಾಡುತ್ತಿದ್ದರು. ಆಗ ಚೈತ್ರಾ ನಾಲಿಗೆ ಹರಿ ಬಿಟ್ಟಿದ್ದಾರೆ.
‘ನನ್ನ ಕ್ಯಾರೆಕ್ಟರ್ ಬಗ್ಗೆ ಯಾರಾದರೂ ಮಾತಾಡಿದರೆ ಮೆಟ್ಟು ತಗೊಂಡು ಹೊಡಿತೀನಿ. ಅದರಿಂದ ನಾನು ಹೊರಗೆ ಹೋದ್ರೂ ಚಿಂತೆ ಇಲ್ಲ. ನಾನು ಮದುವೆ ಫಿಕ್ಸ್ ಮಾಡಿಕೊಂಡು ಬಂದಿದ್ದೇನೆ. ನನಗೆ ಯಾರ ಹತ್ತಿರವೂ ಸಂಬಂಧ ಕಟ್ಟಬೇಡಿ’ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ