ಬೆಳಗಾವಿ : ದಿನಾಂಕ : – 22 – 10- 2024 ಮಂಗಳವಾರದಂದು ಬೆಳಗಾವಿಯ ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದ ಮಹಾಂತ ಭವನ ಸಭಾಂಗಣದಲ್ಲಿ ” ಪೌರತ್ವ ತರಬೇತಿ ಶಿಬಿರ”ವನ್ನು ಆಯೋಜಿಸಲಾಗಿತ್ತು. ಶಿಬಿರ ಉದ್ಘಾಟಕರಾಗಿ ಆಗಮಿಸಿದ ಡಾ. ಎಂ.ಸಿ.ಎರ್ರಿಸ್ವಾಮಿ ಬೇರಮನ್ ಹಾಗೂ ಡೀನ್ ಶಿಕ್ಷಣ ನಿಖಾಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ರವರು ದ್ವೀಪ ಪ್ರಜ್ವಲನೆಯ ಮೂಲಕ ಮೂರು ದಿನಗಳ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಶಿಕ್ಷಕರಾಗುವವರು ತಮ್ಮ ವೃತ್ತಿ, ವಿಷಯ , ವಿದ್ಯಾರ್ಥಿಗಳನ್ನು ಪ್ರೀತಿಸಬೇಕು. ಪೌರತ್ವ ತರಬೇತಿ ಶಿಬಿರದ ಮೂಲಕ ಮಾನವೀಯ ಮೌಲ್ಯಗಳಾದ ಸಹಬಾಳ್ವೆ , ಸಹ ಕಾರ್ಯ , ಸಹಕಾರ, ಸಮಭಾವ, ಸಮತೃಪ್ತಿಗಳನ್ನು ಅಳವಡಿಸಿಕೊಂಡು ಮೌಲ್ಯದ ರಾಯಭಾರಿಗಳಾಗಿ ಕಾರ್ಯನಿರ್ವಹಿಸಬೇಕು. ಮಾನವ ಸಂಬಂಧಗಳು ಕುಸಿಯುತ್ತಿರುವ ಪ್ರಸ್ತುತ ದಿನಗಳಲ್ಲಿ ಅವುಗಳ ಮರು ಅನುಷ್ಠಾನ ತುಂಬಾ ಅವಶ್ಯಕವಾಗಿದೆ. ಪ್ರಕೃತಿ ನಮ್ಮಿಂದ ಏನನ್ನು ಬಯಸದೇ ಎಲ್ಲವನ್ನು ಉಚಿತವಾಗಿ ನೀಡುತ್ತದೆ. ಪ್ರಕೃತಿಯನ್ನು ಗೌರವಿಸಿ, ಪ್ರಕೃತಿಯೊಂದಿಗೆ ಒಂದಾಗಿ ಬೆರೆಯಬೇಕು. ಬೆರೆಯುವಿಕೆ ನಮ್ಮ ಬದುಕಿಗೆ ಸಂತೋಷವನ್ನುಂಟು ಮಾಡುತ್ತದೆ. ಸಂತೋಷಕರವಾದ ಜೀವನ ಬದುಕನ್ನು ಸಾರ್ಥಕಗೊಳಿಸುತ್ತದೆ. ಸಂಬಳದ ಶಿಕ್ಷಕರಾಗದೇ ಶಿಕ್ಷಕ ವೃತ್ತಿಯನ್ನು ಆಗಾಧವಾಗಿ ಪ್ರೀತಿಸಬೇಕು. ನಮ್ಮ ಕಾರ್ಯ ಪ್ರೀತಿಯೂ ನಮ್ಮ ಉನ್ನತ ಬದುಕಿಗೆ ಅಡಿಪಾಯವಾಗುತ್ತದೆ. ಸಂಸ್ಕಾರವಿಲ್ಲದ ಶಿಕ್ಷಣ . ಸಂಸ್ಕಾರವನ್ನು ತರುವುದೇ ಪೌರತ್ವ ತರಬೇತಿ ಶಿಬಿರದ ಪ್ರಮುಖ ಉದ್ದೇಶವಾಗಿರುತ್ತದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ನಿರ್ಮಲಾ ಜಿ ಬಟ್ಟಲ ಪ್ರಾಚಾರ್ಯರು ಮ . ನ. ರ. ಸಂಘದ ಶಿಕ್ಷಣ ಮಹಾವಿದ್ಯಾಲಯ ಹಾಗೂ ಶಿಬಿರದ ಮಹಾದಂಡಾಧಿಕಾರಿ ಅವರು ಮಾತನಾಡಿ ಮಾನವೀಯತೆ ವಿಲ್ಲದ ಶಿಕ್ಷಣ ಅರ್ಥವಿಲ್ಲದಂತೆ, ಪ್ರೀತಿ, ಮಮತೆ, ಸಹಕಾರ್ಯ , ಸಹಬಾಳ್ವೆಯನ್ನು ಬೆಳಸುವುದೇ ಮಾನವೀಯ ಧರ್ಮದ ಮೂಲ ಉದ್ದೇಶ .” ಪೌರತ್ವ ತರಬೇತಿ ಶಿಬಿರದಲ್ಲಿ ವಿಭಿನ್ನ ಪರಿಸರದ ಹಿನ್ನೆಲೆಯಿಂದ ಬಂದ ಶಿಬಿರಾರ್ಥಿಗಳಲ್ಲಿ ಮಾನವೀಯ ಮೂಲ ಬೀಜವನ್ನು ಬಿತ್ತುವುದೇ ಈ ಶಿಬಿರದ ಪ್ರಮುಖ ಕಾರ್ಯ . ಹೊಂದಾಣಿಕೆ, ಒಟ್ಟಿಗೆ ಕಾರ್ಯನಿರ್ವಹಿಸುವುದು, ಕಾರ್ಯದಲ್ಲಿ ಮುಂದಾಳತ್ವವನ್ನು ವಹಿಸುವುದು. ಮಾಡುವ ಕಾರ್ಯವನ್ನು ವಿಭಿನ್ನವಾಗಿ ಮಾಡುವುದು ಯಶಸ್ಸಿನ ಮೂಲ ಮಂತ್ರವಾಗಿರುತ್ತದೆ. ದಾನ, ಧರ್ಮ , ಸಂಸ್ಕಾರ, ನೈತಿಕತೆ, ವಿಭಿನ್ನ ಚಿಂತನೆ , ಕಾರ್ಯ ದಕ್ಷತೆ , ಶ್ರೇಷ್ಠ ತಮ ಆಲೋಚನೆ, ಜಾತ್ಯಾತೀತ ಭಾವ, ಧರ್ಮ ಸಹಿಷ್ಣುತೆಗಳು ಉತ್ತಮ ವ್ಯಕ್ತಿತ್ವದ ಪ್ರತಿರೂಪವಾಗಿರುತ್ತವೆ ಎಂದು ಹೇಳಿ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳನ್ನ ಶಿಬಿರಾರ್ಥಿಗಳನ್ನಾಗಿಸಿ ಶಿಬಿರ ದಂಡಾಧಿಕಾರಿಗಳಾದ ಪ್ರೊ. ರೂಪಾ ಅಕ್ಕಿ ರವರಿಗೆ ಹಸ್ತಾಂತರಿಸಿದರು.
ಸಮಾರಂಭದಲ್ಲಿ ಮ.ನ. ರ ಸಂಘದ ಕಾರ್ಯದರ್ಶಿ ಸಂಜೀವ ಪಟ್ಟಣಶೆಟ್ಟಿ ಹಾಗೂ ಬೋಧಕ – ಬೋಧಕೇತರ ಸಿಬ್ಬಂದಿ ಹಾಗೂ ಶಿಬಿರದ ವಿದ್ಯಾರ್ಥಿ ಕಾರ್ಯದರ್ಶಿ ಆನಂದ ಪಟಾತ, ಶಾಹೀನವಾಜ ಕಿಲ್ಲೆದಾರ ಮತ್ತು ಎಲ್ಲ ಶಿಬಿರಾರ್ಥಿಗಳು ಉಪಸ್ಥಿತರು.
ಶಿಬಿರಾರ್ಥಿ ಪೂಜಾ ಪೂಜೇರಿ ರವರ ತಂಡ ದವರು ಪ್ರಾರ್ಥಿಸಿದರು. ಶಾಹಿನತಾಜ ಕಿಲ್ಲೆದಾರ ಸ್ವಾಗತಿಸಿದರು. ಸಿದ್ಧರಾಮ ತಲ್ಲೂರ ವಂದಿಸಿದರು , ವಿಜಯಲಕ್ಷ್ಮೀ ಪಾಟೀಲ ನಿರೂಪಿಸಿದರು