ಬೈಲಹೊಂಗಲ : ವಿದ್ಯಾರ್ಥಿಗಳು ನಿಮ್ಮ ಭಾಷಾ ಕೌಶಲ್ಯವನ್ನು ಸುಧಾರಿಸಲು ಇಂಗ್ಲಿಷ್ ಸುದ್ದಿ ಪತ್ರಿಕೆಗಳು, ಕಾನೂನು ಜರ್ನಿ ಮತ್ತು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಓದುತ್ತಿರಬೇಕು.ವಿದ್ಯಾರ್ಥಿ ಹಂತವಾಗಿ ನೀವು ಮನಸ್ಸಿನ ಒತ್ತಡವನ್ನು ನಿಯಂತ್ರಿಸಲು ನಿಯಮಿತ ದೈಹಿಕ ವ್ಯಾಯಾಮವನ್ನು ಅಭ್ಯಾಸ ಮಾಡಬೇಕು ಎಂದು ಧಾರವಾಡ ಹೈಕೋರ್ಟ್ ನ್ಯಾಯವಾದಿ ಶಿವರಾಜ ಸಿ. ಬೆಳ್ಳಕ್ಕಿ ಸಲಹೆ ನೀಡಿದರು.

ಬೈಲಹೊಂಗಲ ಕೆ.ಆರ್.ಸಿ.ಇ. ಎಸ್. ಹೆಚ್.ವಿ. ಕೌಜಲಗಿ ಕಾನೂನು ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ 2024-25 ನೇ ಶೈಕ್ಷಣಿಕ ವರ್ಷದ ಸಂಸ್ಕೃತಿಯ ಉದ್ಘಾಟನಾ ಸಮಾರಂಭ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಲ್ಲಾ ವಿದ್ಯಾರ್ಥಿಗಳು ಪ್ರಾಯೋಗಿಕ ಉದ್ದೇಶಕ್ಕಾಗಿ ಸಬ್ಸ್ಟಾಂಟಿವ್ ಕಾನೂನು ವಿಷಯದ ಮೇಲೆ ಕೇಂದ್ರೀಕರಿಸಬೇಕು. ನಂತರ ಕಾರ್ಯವಿಧಾನದ ಕಾನೂನಿನ ವಿಷಯದ ಅಂಶವನ್ನು ಸುಲಭವಾಗಿ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಕೌಜಲಗಿ ಕಾನೂನು ಕಾಲೇಜಿನ ಅಧ್ಯಕ್ಷ ಶಿರೀಶ್ ಕೆ. ತುಡವೇಕರ, ಪ್ರಾಚಾರ್ಯ ಪಿ.ಎನ್.ಪಾಟೀಲ, ಪ್ರಾಧ್ಯಾಪಕರಾದ ಡಿ.ಬಿ.ನರಗುಂದ, ಎಂ.ಎಸ್.ಪಟ್ಟಣಶಟ್ಟಿ ಮತ್ತು  ಪ್ರಧಾನ ಕಾರ್ಯದರ್ಶಿ ರಮ್ಯಾ ಉರಬಿನ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.