ಬೆಂಗಳೂರು : ಜಗತ್ತಿನ ಹಲವು ದೇಶಗಳಲ್ಲಿ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಹಿಂದೂಗಳು ಪ್ರತಿವರ್ಷ ದೀಪಾವಳಿಯನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಈ ವರ್ಷ ಆಸ್ಟ್ರೇಲಿಯಾ ಅಕ್ಟೋಬರ್ ತಿಂಗಳನ್ನು “ಹಿಂದೂ ಪರಂಪರೆ ಮಾಸ” ಎಂದು ಘೋಷಿಸಿದೆ. ರವಿವಾರ ಆಸ್ಟ್ರೇಲಿಯಾ ಸಂಸದ ಆಂಡ್ರ್ಯೂ ಚಾರ್ಲ್ಟನ್‌ “ಅಕ್ಟೋಬರ್ ತಿಂಗಳನ್ನು ಹಿಂದೂ ಪರಂಪರೆ ಮಾಸ” ಎಂದು ಘೋಷಿಸಿದರು.