ಬೆಳಗಾವಿ : ಬೆಳಗಾವಿಯ ಹಿರಿಯ ಪತ್ರಕರ್ತ ಸುಭಾನಿ ಇಮಾಮಸಾಬ್ ಮುಲ್ಲಾ ಅವರಿಗೆ ಈ ಸಲದ ಜಿಲ್ಲಾಮಟ್ಟದ ಮಾಧ್ಯಮ ವಿಭಾಗದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಇನ್ ನ್ಯೂಸ್ ಸುದ್ದಿವಾಹಿನಿ ಬೆಳಗಾವಿಯ ಕ್ಯಾಮರಾಮ್ಯಾನ್ ಆಗಿ ಕಳೆದ 23 ವರ್ಷಗಳಿಂದ ಒಂದೇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದು ಸಾಧನೆ ಮಾಡಿದ್ದ ಶ್ರೇಯ ಸುಭಾನಿ ಅವರಿಗೆ ಸಲ್ಲುತ್ತದೆ.
ಕಳೆದ 2001ರಲ್ಲಿ ಪಿಯುಸಿ ವಿದ್ಯಾಭ್ಯಾಸ ಮುಗಿಸಿರುವ ಸುಭಾನಿ ಅವರು ಬೆಳಗಾವಿಯ ಇನ್ ನ್ಯೂಸ್ ಸುದ್ದಿವಾಹಿನಿಯ ಮರಾಠಿಯಲ್ಲಿ ಕ್ಯಾಮರಾಮ್ಯಾನ್ ಆಗಿ ಸೇವೆ ಸಲ್ಲಿಸಲು ಆರಂಭಿಸಿದರು. ಬಳಿಕ ಇನ್ ನ್ಯೂಸ್ ಸುದ್ದಿ ವಾಹಿನಿ ಕನ್ನಡ, ಮರಾಠಿ, ಇಂಗ್ಲಿಷ್ ಭಾಷೆಯಲ್ಲಿ ಪ್ರಸಾರ ಮಾಡಲು ಪ್ರಾರಂಭಿಸಿದಾಗ ಸುಭಾನಿ ತಮ್ಮ ಕರ್ತವ್ಯವನ್ನು ಚಾಚು ತಪ್ಪದೆ ಮಾಡಿ ಸಮಾಜಕ್ಕೆ ಬೆಳಗಾವಿಯಲ್ಲಿ ನಡೆಯುವ ಸುದ್ದಿಗಳು ಹಾಗೂ ವಿಶೇಷ ವರದಿಗಳನ್ನು ಇನ್ ನ್ಯೂಸ್ ಸುದ್ದಿವಾಹಿನಿಯಲ್ಲಿ ಪ್ರಕಟಿಸಿ ಜಿಲ್ಲಾಡಳಿತ ಹಾಗೂ ಸರಕಾರದ ಕಣ್ಣು ತೆರೆಸುವಂತೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ.
ಕಳೆದ 23 ವರ್ಷಗಳಿಂದ ಇನ್ ನ್ಯೂಸ್ ಸುದ್ದಿವಾಹಿನಿಯಲ್ಲಿ ಕೆಲಸ ಮಾಡಿದ ಏಕೈಕ್ ಕ್ಯಾಮರಾಮ್ಯಾನ್ ಸುಭಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸುಭಾನಿ ಅವರು ಎಷ್ಟೆ ಒತ್ತಡದಲ್ಲಿದ್ದರೂ ಬೆಳಗಾವಿ ಜನರ ಸಮಸ್ಯೆ ಆಲಿಸಲು ಸದಾ ಮುಂದೆ ಇರುವ ವ್ಯಕ್ತಿ. ಬೆಳಗಾವಿ ಪತ್ರಿಕೋದ್ಯಮದ ಅಜಾತ ಶತ್ರು ಎಂದು ಎಲ್ಲರಿಗೂ ಸುಭಾನಿ ಪ್ರೀತಿ ಪಾತ್ರರಾಗಿದ್ದಾರೆ.
ಸುಬಾನಿ ಅವರಿಗೆ ಸುದ್ದಿ ಕೊಡುವುದರ ಜೊತೆಗೆ ಪ್ರವಾಸ, ಕ್ರೀಡೆ, ಸಂಗೀತ ಕೇಳುವುದು, ಹಳೆ ನಾಣ್ಯಗಳ ಸಂಗ್ರಹ ಮಾಡುವ ಹವ್ಯಾಸ ಇದೆ. ಇವರಿಗೆ ತಂದೆ, ತಾಯಿ, ಪತ್ನಿ, ಮೂವರು ಮಕ್ಕಳು ಇದ್ದಾರೆ‌.