ಬೆಳಗಾವಿ : ಚನ್ನಮ್ಮನ ಕಿತ್ತೂರು ಉತ್ಸವದ ಅಂಗವಾಗಿ ಕೊನೆಯ ದಿನ ರಾಣಿ ಚನ್ನಮ್ಮ ಮುಖ್ಯ ವೇದಿಕೆಯಲ್ಲಿ ಚನ್ನಮ್ಮನ ಕಿತ್ತೂರಿನ ಖ್ಯಾತ ಕಲಾವಿದೆ ಕಲಾವತಿ ದೊರೆ ಅವರ ಸುಗಮ ಸಂಗೀತ ಕಾರ್ಯಕ್ರಮ ಜನರ ಮನ ರಂಜಿಸಿತು.

ಬಸವಣ್ಣನವರ ವಚನ ನೀರಿಗೆ ನೈದಿಲೆ ಶೃಂಗಾರ ಹಾಗೂ ಚೈತ್ರದ ಚೆಲುವಿಗೆ ಎಂಬ ಭಾವ ಗೀತೆ ಪ್ರಸ್ತುತ ಪಡಿಸಿದರು.
ಶಿಕ್ಷಕ ಈಶ್ವರ ಗಡಿಬಿಡಿ ಹಾರ್ಮೋನಿಯಂ, ಪ್ರಲ್ಹಾದ ಶಿಗ್ಗಾಂವಿ ತಬಲಾ ಸಾಥ್ ನೀಡಿದರು.