ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿದ್ದ ನಟ ದರ್ಶನ್ ನೋವಿನ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಪಡೆದಿದ್ದು, ಬೆನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವೈದ್ಯಕೀಯ ಚಿಕಿತ್ಸೆಗಾಗಿ ನಟ ದರ್ಶನ್‌ಗೆ ಹೈಕೋರ್ಟ್ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿತ್ತು. ಈ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯ ಮೇರೆಗೆ ಬೆಂಗಳೂರಿನ ಕೆಂಗೇರಿಯಲ್ಲಿರುವಂತ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ನಟ ದರ್ಶನ್ ಅವರು ದಾಖಲಾಗಿದ್ದಾರೆ.
ಬಿಜಿಎಸ್ ಆಸ್ಪತ್ರೆ ತಲುಪಿದ ದರ್ಶನ್ ಅವರನ್ನು ನೋಡುತ್ತಿದ್ದಂತೆ ಅಭಿಮಾನಿಗಳು ಜೈಕಾರ ಹಾಕಿದ್ದಾರೆ. ಕಾರು ಇಳಿದ ದರ್ಶನ್ ಬೆನ್ನು ನೋವಿನ ಹಿನ್ನೆಲೆ ನಿಧಾನವಾಗಿ ನಡೆದುಕೊಂಡು ನಟ ದರ್ಶನ್ ಆಸ್ಪತ್ರೆ ಒಳಗೆ ಹೋಗಿದ್ದಾರೆ.
ನರರೋಗ ತಜ್ಞರು ಚಿಕಿತ್ಸೆ ನೀಡಲಿದ್ದು, ಮತ್ತೆ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.ನಟ ದರ್ಶನ್ ಅವರಿಗೆ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ನೀಡಬೇಕು ಎಂದು ವಕೀಲರು ಕೋರ್ಟ್‌ನಲ್ಲಿ ಮನವಿ ಮಾಡಿದ್ದರು. ಆದರೆ, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಜಾಮೀನು ಮಂಜೂರು ಮಾಡಿದ್ದರೂ ಮೈಸೂರಿಗೆ ಹೋಗಲು ಸಮ್ಮತಿ ಸೂಚಿಸಿಲ್ಲ.
ನಟ ದರ್ಶನ್‌ಗೆ ವಿಪರೀತ ಬೆನ್ನು ನೋವಿದ್ದು, ಎಲ್ 5,ಎಸ್ 1ನಲ್ಲಿ ಬಲ್ಜ್ ಆಗಿದ್ದು ಗಂಭೀರವಾದ ಸಮಸ್ಯೆ ಇದೆ. ಬೆನ್ನು ಹುರಿಯಲ್ಲಿ ಸಮಸ್ಯೆ ಇದೆ. ಹೀಗಾಗಿ ದರ್ಶನ್‌ಗೆ ಸರ್ಜಿಕಲ್ ಚಿಕಿತ್ಸೆ ಅಗತ್ಯವಿದೆ.
ದರ್ಶನ್ ಶಸ್ತ್ರಚಿಕಿತ್ಸೆಗೆಂದು ಟ್ರಯಲ್ ಕೋರ್ಟ್ ವ್ಯಾಪ್ತಿ ಬಿಟ್ಟು ಬೇರೆಡೆ ಹೋಗುವಂತಿಲ್ಲ. ಬೆಂಗಳೂರಿನ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿದೆ.ಆಸ್ಪತ್ರೆಗೆ ದಾಖಲಾದ ನಂತರ ಒಂದು ವಾರದೊಳಗೆ ಕೋರ್ಟ್‌ಗೆ ಚಿಕಿತ್ಸಾ ಕ್ರಮದ ಬಗ್ಗೆ ಮಾಹಿತಿ ನೀಡಬೇಕು. ದರ್ಶನ್ ಮಾಧ್ಯಮಗಳಿಗೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡುವಂತಿಲ್ಲ. ಮಧ್ಯಂತರ ಜಾಮೀನು ಅವದಿ ಮುಗಿದ ಬಳಿಕ ಸೆಷನ್ಸ್ ಕೋರ್ಟ್ ಮುಂದೆ ದರ್ಶನ್ ಹಾಜರಾಗಬೇಕು.