ಬೆಳಗಾವಿ: ಪ್ರಸಿದ್ದ ಹಿಂಡಲಗಾ ಗಣಪತಿ ದೇವಸ್ಥಾನ ಬಳಿಯ ಹಿಂಡಲಗಾ ಗಣಪತಿ ಕೆರೆಯಲ್ಲಿ ಬಾಲಕ ಹಾಗೂ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ಕೊನೆಗೂ ಅವರು ಯಾರು ಎನ್ನುವುದರ ಗುರುತು ಪತ್ತೆ ಹಚ್ಚಲಾಗಿದೆ.

ಕಲಕಾಂಬ ಗ್ರಾಮದ ಕವಿತಾ ಬಸವಂತ ಜುನೇ ಬೆಳಗಾಂವಕರ ಮತ್ತು ಸಮರ್ಥ ಬಸವಂತ ಜುನೇ ಬೆಳಗಾಂವಕರ ಎಂದು ಗುರುತಿಸಲಾಗಿದೆ. ಮಹಿಳೆಯ ಮೂಲತಃ ಜಾಂಬೋಟಿ ರಸ್ತೆಯ ಕಿಣಯೇ ಗ್ರಾಮದವರು ಎನ್ನಲಾಗಿದೆ.
ಇದೀಗ ಪೊಲೀಸರು ಹಾಗೂ ಸಾರ್ವಜನಿಕರು ಅವರ ಗುರುತು ಪತ್ತೆ ಹಚ್ಚಿದ್ದಾರೆ. ಪೊಲೀಸರು ತನಿಖೆ ನಡೆಸಿ ಘಟನೆಯ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಮಹಿಳೆ ಸುಮಾರು 40 ವರ್ಷ ಪ್ರಾಯದವರಾಗಿದ್ದು ಬಾಲಕ 14 ವರ್ಷದವನು. ಕ್ಯಾಂಪ್ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮೂರು ದಿನಗಳ ಹಿಂದೆ ಕಲಕಾಂಬ ಗ್ರಾಮದಿಂದ ಇವರು ನಾಪತ್ತೆಯಾಗಿದ್ದರು.
ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತಾಯಿ, ಮಗ ಕೆರೆಯ ಬಳಿ ಚಪ್ಪಲಿ ತೆಗೆದು ನೀರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫೇಸ್ಬುಕ್ ಫ್ರೆಂಡ್ ಸರ್ಕಲ್ ಬಸವರಾಜ ಹಿರೇಮಠ, ಸಂತೋಷ ಧರೇಕರ ಅವರು ಶವ ಹೊರತೆಗೆಯಲು ಯತ್ನಿಸಿದರು.

ಮೂರು ದಿನಗಳ ಹಿಂದೆಯೆ ಇವರು ನೀರಿಗೆ ಜಿಗಿದಿರಬಹುದು. ಗಂಡ ಹಾಗೂ ಅತ್ತೆಯ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಡೆತ್ ನೋಟ್ ಸಿಕ್ಕಿದೆ.