ಪುತ್ತೂರು: ದೀಪಾವಳಿ ಹಬ್ಬದ ರಜೆಯ ಕಾರಣ ಪುತ್ತೂರು ಕೆ ಎಸ್ ಆರ್ ಟಿ ಸಿ ಚಾಲಕರಯ ಊರಿಗೆ ತೆರಳಿದ ಕಾರಣ ಸೋಮವಾರದಂದು ಗ್ರಾಮೀಣ ಭಾಗದ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು ,ಬಳಿಕ ಶಾಸಕರಾದ ಅಶೋಕ್ ರೈ ಅವರು ಬದಲಿ ವ್ಯವಸ್ಥೆ ಮಾಡಿಸುವ ಮೂಲಕ ಸಮಸ್ಯೆಗೆ ಇತಿಶ್ರೀ ಹಾಡಿದ್ದಾರೆ.
ಗ್ರಾಮೀಣ ಭಾಗದ ಸುಮಾರು ಎಂಟು ಕಡೆಗಳಲ್ಲಿ ಬಸ್ ಸಂಚಾರ ಆಗಿರಲಿಲ್ಲ. ಆ ಭಾಗಲ್ಲೆ ತೆರಳುವ ಚಾಲಕರು‌ ಭಾನುವಾರದಂದು ರಜೆ ಮಾಡಿ ಊರಿಗೆ ತೆರಳಿದ್ದರು. ಬೆಳಿಗ್ಗೆ ಶಾಲಾ ವಿದ್ಯಾರ್ಥಿಗಳಿಗೆ ಇದರಿಂದ ಸಮಸ್ಯೆ ಉಂಟಾಗಿತ್ತು.‌ವಿದ್ಯಾರ್ಥಿ ಪೋಷಕರು ಶಾಸಕರಲ್ಲಿ‌ಮನವಿ ಮಾಡಿದ್ದು ತಕ್ಷಣ ಸ್ಪಂದಿಸಿದ ಶಾಸಕರು ಡಿಪೋ ಮೆನೆಜರ್ ಗೆ ಕರೆ ಮಾಡಿ ಗ್ರಾಮಾಂತರ ಭಾಗಕ್ಕೆ ಬಸ್ ವ್ಯವಸ್ಥೆ ಮಾಡುವಂತೆ ಸೂಚನೆಯನ್ನು ನೀಡಿದ್ದಾರೆ.‌ಬಳಿಕ‌ಗ್ರಾಮಾಂತರ ಭಾಗದಲ್ಲಿ ಕೊರತೆ ಇದ್ದ ಕಡೆ ಬಸ್‌ಸಂಚಾರ ಆರಂಭವಾಗಿದೆ.

ಬಸ್ ಬಾರದೆ ಇರುವ ಬಗ್ಗೆ ಗ್ರಾಮಾಂತರ‌ಭಾಗದಿಂದ ಹಲವಾರು‌ಮಂದಿ ಕರೆ ಮಾಡಿದ್ದರು. ಚಾಲಕರು ರಜೆಯ‌ಮೇಲೆ ತೆರಳಿದ ಕಾರಣ ಈ ಸಮಸ್ಯೆ ಉಂಟಾಗಿದೆ, ಡಿಪೋ‌ಮೆನೆಜರ್ ಗೆ ಹೇಳಿ ಸಮಸ್ಯೆಯ‌ನ್ನು ಪರಿಹರಿಸಿದ್ದೇನೆ.

*ಅಶೋಕ್ ರೈ ಶಾಸಕರು ,ಪುತ್ತೂರು

ಚಾಲಕರ ಕೊರತೆಯಿಂದ ಗ್ರಾಮೀಣ ಭಾಗದಲ್ಲಿ ಬಸ್ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಶಾಸಕರ ಸೂಚನೆಯಂತೆ ಹೆಚ್ಚುವರಿ ಚಾಲಕರನ್ನು ಕರೆಸಿ ಬಸ್‌ಕಳುಹಿಸಲಾಗಿದೆ‌ಮತ್ತು ಸಮಸ್ಯೆಯನ್ನು ಇತ್ಯರ್ಥಪಡಿಸಲಾಗಿದೆ.

* ಶ್ರೀಕಾಂತ್ ,ಡಿಪೋ ಮೆನೆಜರ್, ಪುತ್ತೂರು