ಮುಂಬೈ: 2023ರಲ್ಲಿ 2000 ರು. ಮುಖಬೆಲೆಯ ನೋಟುಗಳನ್ನು ಹಿಂಪಡೆಯತೊಡಗಿದ್ದ ಆರ್‌ಬಿಐ, ಈಗಾಗಲೇ ಶೇ.98.04ರಷ್ಟು ನೋಟುಗಳು ತನಗೆ ವಾಪಸ್ ಬಂದಿವೆ ಎಂದು ಸೋಮವಾರ ಮಾಹಿತಿ ನೀಡಿದೆ. ಆದರೆ ಇನ್ನೂ 6,970 ಕೋಟಿ ರು. ಜನರ ಬಳಿಯೇ ಇದೆ ಎಂದು ಹೇಳಿದೆ. 2023ರ ಮೇ 19ರಂದು ₹2000ದ 3.56 ಲಕ್ಷ ಕೋಟಿ ಬೆಲೆಯ ನೋಟುಗಳು ಚಲಾವಣೆಯಲ್ಲಿದ್ದು, ಇದರ ಮೊತ್ತ 2024ರ ಅ.31ರ ವೇಳೆಗೆ 6,970 ಕೋಟಿಗೆ ಇಳಿದಿದೆ. 2023ರ ಅ.7ರ ವರೆಗೆ ₹2000 ನೋಟುಗಳ ಜಮೆ ಅಥವಾ ಬದಲಾವಣೆಗೆ ಎಲ್ಲಾ ಬ್ಯಾಂಕುಗಳಲ್ಲಿ ಅವಕಾಶ ನೀಡಲಾಗಿತ್ತು.