ಜಬಲ್ಪುರ : ಮಧ್ಯಪ್ರದೇಶದ ಪೊಲೀಸರು 26 ವರ್ಷದ ಯುವಕನ ಕೊಲೆ ಪ್ರಕರಣದಲ್ಲಿ ಶಂಕಿತನ ಅಂಗಿ ಮೇಲಿದ್ದ ನೊಣಗಳು ಈ ಪ್ರಕರಣದ ರಹಸ್ಯ ಭೇದಿಸಲು ಪೊಲೀಸರಿಗೆ ನೆರವಾಗಿವೆ.
ಈ ನೊಣಗಳು 19 ವರ್ಷದ ಯುವಕನು ತಾನು ಅಪರಾಧವನ್ನು ಎಸಗಿರುವುದಾಗಿ ಒಪ್ಪಿಕೊಳ್ಳಲು ಕಾರಣವಾಯಿತು. ಆದರೆ ಇದೇ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಪೋಲೀಸರು ಆತನನ್ನು ಈ ಮೊದಲು ಬಿಟ್ಟುಕಳುಹಿಸಿದ್ದರು.
ಹಾಗಾದರೆ ಆಗಿದ್ದೇನು..?
ಅಕ್ಟೋಬರ್ 30 ರ ದೀಪಾವಳಿಯ ಮುನ್ನಾದಿನ, ಮನೋಜ ಠಾಕೂರ್ ತನ್ನ ಅಣ್ಣನ ಮಗ ಧರಂ ಸಿಂಗ್ ಎಂಬಾತನೊಂದಿಗೆ ಕುಡಿಯಲು ಹೊರಗೆ ಹೋಗಿದ್ದರು. ಅವರು ಸ್ಥಳೀಯ ಅಂಗಡಿಯಿಂದ ಮದ್ಯವನ್ನು ಖರೀದಿಸಿದರು. ಮದ್ಯ ಸೇವನೆ ನಂತರ ಆಹಾರ ಸೇವಿಸಿದರು. ನಂತರ ಧರಂ ಸಿಂಗ್ ಮನೆಗೆ ಹಿಂದಿರುಗಿದ್ದಾನೆ, ಆದರೆ ಮನೋಜ ಠಾಕೂರ್ ಹಿಂತಿರುಗಿ ಬಂದಿರಲಿಲ್ಲ. ನಂತರ ಆತನ ಕುಟುಂಬವು ಮನೋಜ ಠಾಕೂರ್ ಕಾಣೆಯಾದ ಬಗ್ಗೆ ಜಬಲ್ಪುರ ಪೊಲೀಸರಿಗೆ ದೂರು ನೀಡಿತು. ಮರುದಿನ ನಗರದ ಹೊರವಲಯದ ಹೊಲವೊಂದರಲ್ಲಿ ಶವ ಪತ್ತೆಯಾಗಿತ್ತು ಹಾಗೂ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಮೃತದೇಹ ಠಾಕೂರ್ ಅವರದ್ದಾಗಿತ್ತು.ಅಣ್ಣನ ಮಗನ ವಿಚಾರಣೆ…
ಮನೋಜ ಠಾಕೂರ್ ಅವರು ಧರಂ ಸಿಂಗ್ ಜೊತೆ ಕೊನೆಯದಾಗಿ ಕಾಣಿಸಿಕೊಂಡಿದ್ದರಿಂದ, ಪೊಲೀಸರು ಧರಂ ಸಿಂಗ್ನನ್ನು ಪ್ರಶ್ನಿಸಲು ನಿರ್ಧರಿಸಿದರು. ಆದಾಗ್ಯೂ, ಕೊಲೆ ಪ್ರಕರಣದಲ್ಲಿ ಆತ ಪಾಲ್ಗೊಂಡಿದ್ದಾನೆ ಎಂದು ತೋರಿಸುವ ಯಾವುದೇ ನೇರ ಸುಳಿವು ಹಾಗೂ ಪುರಾವೆಗಳಿರಲಿಲ್ಲ, ಸ್ಪಷ್ಟ ಉದ್ದೇಶವಿರಲಿಲ್ಲ ಮತ್ತು ದರೋಡೆಯ ಯಾವುದೇ ಲಕ್ಷಣಗಳಿರಲಿಲ್ಲ.
ತಮ್ಮ ತನಿಖೆ ಯಾವುದೇ ಪ್ರಗತಿ ಸಾಧಿಸಿದ ಕಾರಣ ಪೊಲೀಸರು ಪ್ರಕರಣವನ್ನು ಮರುಪರಿಶೀಲಿಸಿದರು. ಅವರಿಗೆ ಯಾವುದೇ ಮುನ್ನಡೆ ಇರಲಿಲ್ಲ, ಆದರೆ ಧರಂ ಸಿಂಗ್ ಕೊನೆಯದಾಗಿ ಮನೋಜ ಠಾಕೂರ್ ಜೊತೆ ಕಾಣಿಸಿಕೊಂಡಿದ್ದರಿಂದ, ಪೊಲೀಸರು ಆತನನ್ನು ಮತ್ತೊಂದು ಸುತ್ತಿನ ವಿಚಾರಣೆಗೆ ಕರೆಯಲು ನಿರ್ಧರಿಸಿದರು. ಈ ಸಮಯದಲ್ಲಿ, ತನಿಖಾಧಿಕಾರಿಗಳ ಗಮನವನ್ನು ಸೆಳೆಯುವ ವಿಚಿತ್ರವಾದ ವಿದ್ಯಮಾನ ಸಂಭವಿಸಿತು: ನೊಣಗಳು ಧರಂ ಸಿಂಗ್ ಸುತ್ತ ಝೇಂಕರಿಸುತ್ತ ಸುತ್ತುತ್ತಿದ್ದವು. ಆತ ನೊಣಗಳನ್ನು ಎಷ್ಟು ಬಾರಿ ದೂರ ಮಾಡಲು ಪ್ರಯತ್ನಿಸಿದರೂ ಅವುಗಳು ಆತನ ಸುತ್ತುವುದನ್ನು ಬಿಡಲಲಿಲ್ಲ.ಕೊಲೆ ರಹಸ್ಯ ಭೇದಿಸಲು ನೊಣಗಳ ಸಹಾಯ…
ನೊಣಗಳು ವಿಶೇಷವಾಗಿ ಧರಂ ಸಿಂಗ್ ಸುತ್ತ ಹಾರಾಡುವುದನ್ನು ನೋಡಿ ಚಾರ್ಗವಾನ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಅಭಿಷೇಕ ಪಯಾಸಿ ಅವರಿಗೆ ಅನುಮಾನ ಬಂದಿತು. ಅವರು ಅಂಗಿಯನ್ನು ಪರೀಕ್ಷೆಗೆ ನೀಡುವಂತೆ ಧರಂ ಸಿಂಗ್ ಗೆ ಸೂಚಿಸಿದರು.
ಶರ್ಟ್ ಅನ್ನು ಪರೀಕ್ಷೆಗಾಗಿ ಫೋರೆನ್ಸಿಕ್ ಲ್ಯಾಬ್ಗೆ ಕಳುಹಿಸಿದಾಗ, ಅದರಲ್ಲಿ ಮಾನವ ರಕ್ತದ ಕುರುಹುಗಳು ಪತ್ತೆಯಾಗಿದೆ, ಅದನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಾಗುತ್ತಿರಲಿಲ್ಲ. ವರದಿಯ ನಂತರ ವಿಚಾರಣೆಯ ಸಮಯದಲ್ಲಿ, ಸಿಂಗ್ ಅಂತಿಮವಾಗಿ ಅಪರಾಧ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದ ನಂತರ ತನ್ನ ಚಿಕ್ಕಪ್ಪನನ್ನು ಕೊಂದಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಮನೋಜ ಠಾಕೂರ್ ಮದ್ಯ ಮತ್ತು ಆಹಾರಕ್ಕಾಗಿ ಹೆಚ್ಚಿನ ಹಣ ನೀಡುವಂತೆ ಸಿಂಗ್ ಗೆ ಹೇಳಿದಾಗ ವಾಗ್ವಾದ ನಡೆಯಿತು. ಆಗ ಇಬ್ಬರೂ ಮದ್ಯಪಾನ ಮಾಡುತ್ತಿದ್ದರು. ಠಾಕೂರ್ ತನಗೆ ಮೊದಲು ಹೊಡೆದರು, ಆದ್ದರಿಂದ ತಾನು ಮರದ ತುಂಡಿನಿಂದ ಪ್ರತಿಯಾಗಿ ಹೊಡೆದೆ. ಇದರಿಂದ ಮನೋಜ ಠಾಕೂರ್ ಗಾಯಗೊಂಡ. ಅದು ಆತನ ಸಾವಿಗೆ ಕಾರಣವಾಯಿತು ಎಂದು ಧರಂ ಸಿಂಗ್ ಹೇಳಿದ್ದಾನೆ.ನಂತರ ಅಪರಾಧ ಸ್ಥಳಕ್ಕೆ ತೆರಳಿ ಪೊಲೀಸರು ಕೊಲೆ ಮಾಡಿದ ಆಯುಧವನ್ನು ಪತ್ತೆ ಮಾಡಿದ್ದಾರೆ. ನಂತರ ತನ್ನ ಚಿಕ್ಕಪ್ಪನ ಕೊಲೆ ಆರೋಪದ ಮೇಲೆ ಧರಂ ಸಿಂಗ್ ನನ್ನು ಬಂಧಿಸಲಾಯಿತು.