ಬೆಳಗಾವಿ : ಸುಪ್ರಸಿದ್ಧ ಕವಯಿತ್ರಿ ಹಾಗೂ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಸಂಸ್ಥಾಪಕಿ ಆಶಾ ಕಡಪಟ್ಟಿ ಇಂದು ಮುಂಜಾನೆ ೭.೫೫ ಕ್ಕೆ ನಿಧನರಾಗಿದ್ದಾರೆ. ಅವರಿಗೆ ೬೮ ವರ್ಷ ವಯಸ್ಸಾಗಿತ್ತು.
ಕಾವ್ಯ ಕ್ಷೇತ್ರದಂತೆಯೇ ಅವರು ಒಳ್ಳೆಯ ಹಾಡುಗಾರರೂ ಆಗಿದ್ದರು.ಅನೇಕ ಕವನ ಸಂಕಲನಗಳನ್ನು ಹಾಗೂ ಗದ್ಯ ಸಾಹಿತ್ಯವನ್ನೂ ರಚಿಸಿದ್ದರು.
ಅವರ ಪಾರ್ಥಿವ ಶರೀರವನ್ನು ಹೊನಗಾದಲ್ಲಿರುವ ಡಾ ರವಿ ಪಾಟೀಲ ಅವರ ಆಶ್ರಮ ಆಸ್ಪತ್ರೆಯಲ್ಲಿ ಇಂದು ಮಧ್ಯಾನ್ಹ ೧೨ ಗಂಟೆಯ ವರೆಗೆ ಸಾರ್ವಜನಿಕ ರ ದರ್ಶನಕ್ಕಾಗಿ ಇಡಲಾಗುವುದು. ಅನಂತರ ಪಾರ್ಥಿವ ಶರೀರವನ್ನು ಕೆಎಲ್ಈ ಆಸ್ಪತ್ರೆಗೆ ಹಸ್ತಾಂತರಿಸಲಾಗುವುದು.