ಮೂಡಲಗಿ: ಕನಕದಾಸರು ಕುಲ,ಜಾತಿಗಳ ಸಂಕೋಲೆಗಳನ್ನು ಕಿತ್ತು, ದೇವರ ದೃಷ್ಟಿಯಲ್ಲಿ ಎಲ್ಲರೂ ಒಂದೇ ಎಂಬ ಸಂದೇಶ ಸಾರಿದ ಅವರ ಸಮ ಸಮಾಜದ ಬೋಧನೆಗಳು, ಆಧ್ಯಾತ್ಮಿಕ ಚಿಂತನೆಗಳು ಸಮಸ್ತ ಮನುಕುಲಕ್ಕೆ ಮಾರ್ಗದರ್ಶಕಗಳಾಗಿವೆ ಎಂದು ಬಸವರಾಜ ಕಡಾಡಿ ಹೇಳಿದರು.

ಸೋಮವಾರ ನ-18 ರಂದು ಕಲ್ಲೋಳಿ ಪಟ್ಟಣದ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರ ಜನಸಂಪರ್ಕ ಕಾರ್ಯಾಲಯದಲ್ಲಿ ಕನಕದಾಸರ 537ನೇ ಜಯಂತಿಯ ನಿಮಿತ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು
ಕನಕದಾಸರು ಕೀರ್ತನಕಾರರಾಗಿ, ತತ್ವಜ್ಞಾನಿಯಾಗಿ, ದಾರ್ಶನಿಕರಾಗಿ,ಕನ್ನಡನಾಡಿನ ಸಾಂಸ್ಕೃತಿಕ ಪರಂಪರೆಗೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ನಿರ್ದೆಶಕರಾದ ಪರಪ್ಪ ಮಳವಾಡ, ಬಾಳಪ್ಪ ಸಂಗಟಿ, ಮಲ್ಲಿಕಾರ್ಜುನ ಹುಲೆನ್ನವರ, ಹಣಮಂತ ಕಲಕುಟ್ರಿ, ವಿಠ್ಠಲ ಜಟ್ಟೆನ್ನವರ, ಪ್ರಶಾಂತ ಪಟ್ಟಣಶೆಟ್ಟಿ, ಶಿವಾನಂದ ಕಡಾಡಿ, ಸಂಸದರ ಆಪ್ತಕಾರ್ಯದರ್ಶಿ ಸಂತೋಷ ಬಡಿಗೇರ, ಬಿ.ಆರ್.‌ ಪಾಟೀಲ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.