ಶಿರ್ತಾಡಿ : ಶಿರ್ತಾಡಿಯ ಭುವನ ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ವತಿಯಿಂದ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಲಾಲ್ ನೆಹರು ಅವರ ಜನ್ಮದಿನದ ಸ್ಮರಣಾರ್ಥ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾಲೇಜಿನ ಕರೆಸ್ಪಾಂಡೆಂಟ್ ಪ್ರಶಾಂತ್ ಎನ್. ಮಾತನಾಡಿ, ಮಕ್ಕಳು ಈ ದೇಶದ ಭವ್ಯ ಸಂಪತ್ತು. ಅವರಿಗೆ ಯೋಗ್ಯ ಶಿಕ್ಷಣ ನೀಡಿ ಮಹಾನ್ ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು.

ಪ್ರಾಚಾರ್ಯ ಪ್ರದೀಪ ಎಂ.ಬಿ. ಮಾತನಾಡಿ, ಭವಿಷ್ಯದ ದಿನಗಳಲ್ಲಿ ಮಕ್ಕಳ ಹಕ್ಕುಗಳ ಉದ್ದೇಶಕ್ಕೆ ಕೆಲಸ ಮಾಡಲು, ಯುವಕರಿಗೆ ಅನುಕೂಲವಾಗುವಂತೆ ಗುಣಮಟ್ಟದ ಕಾನೂನು ಶಿಕ್ಷಣ ನೀಡಲು ಸಂಸ್ಥೆ ಬದ್ದವಾಗಿದೆ. ಉತ್ತಮ ವಿದ್ಯಾರ್ಥಿಗಳನ್ನು ಬೆಳೆಸುವ ಕಾರ್ಯವನ್ನು ಮಹಾವಿದ್ಯಾಲಯ ಮಾಡಲಿದೆ ಎಂದರು.

ರಾಘವೇಂದ್ರ ಪ್ರಭು, ಲತಾ ಎ., ಸುಧೀನ್ ಎಂ.ಎಸ್, ಡಾ.ಕೌಶಿಕ್, ಸಂಗಮಿತ್ರ ರಾಯ್ ಪೈ, ಕುಮಾರಿ ದಿವ್ಯಾ ಉಪಸ್ಥಿತರಿದ್ದರು.