ಪುತ್ತೂರು : ಭಾರತದ ಪ್ರಥಮ ಮಹಿಳಾ ಪ್ರಧಾನಿಯಾಗಿ ಆಡಳಿತ ನಡೆಸಿದ ಉಕ್ಕಿನ ಮಹಿಳೆ ಶ್ರೀಮತಿ ಇಂದಿರಾ ಗಾಂಧಿಯವರು ತಮ ಆಡಳಿತದ ಅವಧಿಯಲ್ಲಿ ಮಕ್ಕಳು ಅಪೌಷ್ಟಿಕತೆ ಯಿಂದ ಬಳಲುತ್ತಿರುವುದನ್ನು ಕಂಡು ಮರುಗಿ ಅದರ ಪರಿಹಾರಕ್ಕಾಗಿ ಅಪೌಷ್ಟಿಕತೆಯ ವಿರುದ್ಧ ಸೆಣಸಲು, ಅದೂ ವಿಶೇಷವಾಗಿ ಸಣ್ಣ ಮಕ್ಕಳಲ್ಲಿನ ಪೌಷ್ಟಿಕ ಕೊರತೆ ನೀಗಿಸಲು ಅಧಿಕ ಹಾಲಿನ ಉತ್ಪಾದನೆ, ಹೈನುಗಾರಿಕೆಗೆ ಅತಿ ಹೆಚ್ಚು ಪ್ರೋತ್ಸಾಹ ನೀಡಿದ ಪರಿಣಾಮ ಹಾಲಿನ ಉತ್ಪಾದನೆ ಬೇಡಿಕೆಯನ್ನೂ ಮೀರಿತು. ಇದು ‘ಶ್ವೇತಕ್ರಾಂತಿ’ ಎಂದೇ ಹೆಸರಾಯಿತು.
ಸ್ತ್ರೀ-ಪುರುಷರ ನಡುವಿನ ಸಮಾನತೆ ಶ್ರೀಮತಿ ಇಂದಿರಾ ಗಾಂಧಿ ಅವರ ಬರಿಯ ಭಾಷಣದ ವಿಷಯ ಆಗಿರಲಿಲ್ಲ. ಈ ಕಾರಣಕ್ಕೆ ಅವರ ಆಡಳಿತ ಅವಧಿಯಲ್ಲೇ ಪುರುಷರು ಮತ್ತು ಮಹಿಳೆಯರಿಗೆ ಸಮನಾದ ಕೆಲಸಕ್ಕೆ ಸಮಾನ ವೇತನ ನೀಡುವ ತತ್ವಕ್ಕೆ ಸಂವಿಧಾನಿಕ ಮಾನ್ಯತೆ ನೀಡಿದರು. ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಛೇರಿ ಯಲ್ಲಿ ಇಂದಿರಾ ಗಾಂಧಿ ಜನುಮದಿನ ಕಾರ್ಯಕ್ರಮದಲ್ಲಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕೃಷ್ಣಪ್ರಸಾದ್ ಆಳ್ವರು ಮಾತನಾಡಿ 1967ರಲ್ಲಿ ರಾಷ್ಟ್ರೀಯ ಪರಮಾಣು ಯೋಜನೆಯನ್ನು ಪ್ರಾರಂಭಿಸಿದರು. ಚೀನಾ ಒಡ್ಡಿದ ಪರಮಾಣು ಬೆದರಿಕೆಗೆ ಉತ್ತರವಾಗಿ ಮತ್ತು ಪರಮಾಣು ಬಲಿಷ್ಠ ರಾಷ್ಟ್ರಗಳು ಸ್ವತಂತ್ರವಾಗಿರುವಂತೆ ಭಾರತವೂ ತನ್ನ ಸ್ಥಿರತೆ ಮತ್ತು ಭದ್ರತಾ ಹಿತರಕ್ಷಣೆಯನ್ನು ಕಾಪಾಡಿಕೊಳ್ಳುವುದು ಇದರ ಉದ್ದೇಶವಾಗಿತ್ತು. 1974ರಲ್ಲಿ ಭಾರತವು ರಾಜಸ್ಥಾನದ ಪ್ರೊಬ್ರಾನ್ ಬಂಜರು ಹಳ್ಳಿಯಲ್ಲಿ ‘ಸ್ಟೈಲಿಂಗ್ ಬುದ್ಧ’ ಎಂಬ ರಹಸ್ಯ ಕೋಡ್ ವರ್ಡ್ ಹೊಂದಿದ್ದ ಪರಮಾಣು ಪರೀಕ್ಷೆಯನ್ನು ಭೂಗರ್ಭದೊಳಗೆ ಯಶಸ್ವಿಯಾಗಿ ಮಾಡಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರು ಮಹಮ್ಮದ್ ಬಡಗನ್ನೂರು ಮತ್ತು ಮಹೇಶ್ಚಂದ್ರ ಸಾಲಿಯಾನ್ ಇವರಿಗೆ ಸನ್ಮಾನಿಸಲಾಯಿತು. ಈ ಕಾರ್ಯಕ್ರಮವನ್ನು ರಾಜ್ಯ ವಕ್ತಾರ ಅಮಲ ರಾಮಚಂದ್ರ ರು ನಡೆಸಿಕೊಟ್ಟರು.
ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷರು ಎಂಬಿ ವಿಶ್ವನಾಥ ರೈ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರು ಶಕೂರ್ ಹಾಜಿ, ಪ್ರಧಾನ ಕಾರ್ಯದರ್ಶಿ ವಿನೀತ ನಾಯ್ಕ್ ಉಪಸ್ಥಿತರಿದ್ದರು.
ಈ ಕಾರ್ಯದಲ್ಲಿ ಶರೀಫ್ ಬಲ್ನಾಡ್, ಇಸ್ಮಾಯಿಲ್ ಬಲ್ನಾಡ್ ಇಸಾಕ್ ಸಾಲ್ಮರ, ಪ್ರಜ್ವಲ್ ರೈ ತೊಟ್ಲ, ವಿಶಾಲಾಕ್ಷಿ ಬನ್ನೂರು, ಸಿರಿಲ್ ಡಿಸೋಜ, ಸನತ್ ರೈ ಕುರಿಯ, ಲ್ಯಾನ್ಸಿ ಮಸ್ಕರೇನಸ್, ಸುರೇಶ್ ಸಾಲಿಯಾನ್, ಆದಂಕುಂಞಿ ಕಲ್ಲರ್ಪೆ, ಶ್ಯಾಮ್ ಸುಂದರ್ ರೈ, ಮೊಹಮ್ಮದ್ ರಿಯಾಝ್, ವಿಶ್ವಜೀತ್ ಅಮ್ಮುಂಜೆ, ಸುಪ್ರೀತ್ ಕಣ್ಣರಾಯ, ಮಾಧವ ಅಜಿಲಡ್ಕ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಅಶೋಕ್ ಪಾಯ್ಸ್, ಅಬ್ದುಲ್ ಸಮದ್, ಆಸಿಫ್ ತಂಬುತಡ್ಕ, ಕೆ ಎಂ ಹನೀಫ್ ಮಾಡ್ನೂರು, ಶಕೂರು ಮಾಡಾವು, ಮೋನು ಬಪ್ಪಳಿಗೆ, ಆಶಿಕ್ ಸಂಪ್ಯ, ಎ ಗಿರಿಧರ ಗೌಡ ಸಂಪ್ಯ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಸೇವಾದಳದ ಅಧ್ಯಕ್ಷರು ಜೋಕೀಂ ಡಿಸೋಜ ವಂದೇ ಮಾತರಂ ಹಾಡುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕೃಷ್ಣಪ್ರಸಾದ್ ಆಳ್ವರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ವಂದಿಸಿದರು.