ಉಡುಪಿ: ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ವಿಶ್ವವಿದ್ಯಾನಿಲಯ ಮಟ್ಟದ ವಿಚಾರ ಸಂಕಿರಣ ದಿನಾಂಕ 19-4-2024ರಂದು ಪೂರ್ಣ ಪ್ರಜ್ಞಾ ಕಾಲೇಜಿನ ಇತಿಹಾಸ ವಿಭಾಗ ಹಾಗೂ ಸಮಾಜವಿಜ್ಞಾನ ವಿಭಾಗ,ಆಂತರಿಕ ಗುಣಮಟ್ಟ ಪರಿಶೀಲನಾ ವಿಭಾಗ ಹಾಗೂ ಪಾದೂರು ಗುರುರಾಜ್ ಭಟ್ ಟ್ರಸ್ಟ್ ಇವರ ಜಂಟಿ ಸಹಯೋಗದಲ್ಲಿ ಒಂದು ದಿನದ ವಿಚಾರ ಸಂಕಿರಣ ನಡೆಯಿತು.
ಉದ್ಘಾಟರಾಗಿ ವಿಶ್ವನಾಥ ಪಾದೂರು ಆಗಮಿಸಿದ್ದರು. ಜಗದೀಶ್ ಶೆಟ್ಟಿ ಮುಖ್ಯ ಅತಿಥಿಯಾಗಿ ಇದ್ದರು.ಉದ್ಘಾಟನ ಸಮಾರಂಭದ ನಂತರ ವಿವಿಧ ವಿಷಯದ ಬಗ್ಗೆ ಸಂಪನ್ಮೂಲವ್ಯಕ್ತಿಗಳು ವಿಚಾರ ಮಂಡಿಸಿದರು.
ಪಾದೂರು ಗುರುರಾಜ್ ಭಟ್ ಅವರ ಸಂಶೋಧನೆಯ ವಿವಿಧ ಕೊಡುಗೆಗಳನ್ನು ಸಂಪನ್ಮೂಲವ್ಯಕ್ತಿಗಳು ವಿವರಿಸಿದರು. ವಿಭಾಗದ ಮುಖ್ಯಸ್ಥರು, ಸಮಾಜ ವಿಜ್ಞಾನ ವಿಜ್ಞಾನ ವಿಭಾಗದ ಮುಖ್ಯಸ್ಥರು ಹಾಗೂ ವಿವಿಧ ಕಾಲೇಜ್ ನಿಂದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.